
- ನಾಗೋಡಿ ಹೆದ್ದಾರಿ ತಡೆಗೋಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಮ್ಮನೆ ಆಕ್ರೋಶ : ಎಂಜನಿಯರ್ ತಮ್ಮ ಪದವಿಯ ಮತ್ತೊಮ್ಮೆ ಅಧ್ಯಯನ ಮಾಡಲಿ
ನಾಗೋಡಿ ಹೆದ್ದಾರಿ ತಡೆಗೋಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಮ್ಮನೆ ಆಕ್ರೋಶ : ಎಂಜನಿಯರ್ ತಮ್ಮ ಪದವಿಯ ಮತ್ತೊಮ್ಮೆ ಅಧ್ಯಯನ ಮಾಡಲಿ
ಹೊಸನಗರ: ನಾಗೋಡಿ ಹೆದ್ದಾರಿಗೆ ನಡೆಸಿರುವ ತಡೆಗೋಡೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಾಮಗಾರಿ ನಡೆಸಿದ ಎಂಜನಿಯರ್ ತಾವು ಕಲಿತ ಪದವಿಯನ್ನು ಮತ್ತೊಮ್ಮೆ ಅಧ್ಯಯನ ಮಾಡಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೆ ಕುಸಿಯುವ ಭೀತಿಯಲ್ಲಿರುವ ನಾಗೋಡಿ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ಅವರು, ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಲಾಗಿದೆ ಇದು 40 ಪರ್ಸೆಂಟ್ ನ ಮಹಿಮೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಮಾಡಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ. ನಾನು ಎಂಜನಿಯರ್ ಅಲ್ಲ ಆದರೂ ಮೇಲ್ನೋಟಕ್ಕೆ ಕಾಮಗಾರಿ ನೋಡಿದರೆ ಎಂತವರಿಗೂ ಅರಿವಾಗುತ್ತದೆ ಎಂದಿದ್ದಾರೆ.
ಇದು ಸ್ಥಳೀಯ ಶಾಸಕರು, ಸಂಸದರಿಗೆ ಸಂಬಂಧಿಸಿದ್ದಾಗಿದ್ದು ಕೂಡಲೇ ಗಮನ ಹರಿಸಲಿ. ನಾಗೋಡಿ ಮಾರ್ಗ ಮಹತ್ವದ ಸಂಪರ್ಕ ರಸ್ತೆಯಾಗಿದೆ. ಸಂಪರ್ಕ ಕಡಿತಗೊಂಡರೆ ಪ್ರಯಾಣ ದುಸ್ತರವಾಗುತ್ತದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಪ್ರಮುಖರಾದ ರವೀಶ ಹೆಗಡೆ, ಚಂದ್ರಶೇಖರ ಶೆಟ್ಟಿ, ರವಿ ಪೂಜಾರಿ ಇತರರು ಇದ್ದರು.
