![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಬೈಕ್ ಮೇಲೆ ಚಿರತೆಯೊಂದು ಎರಗಿ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾದ ಘಟನೆ ರಾಣೇಬೆನ್ನೂರು ಬೈಂದೂರು ಹೆದ್ದಾರಿಯ ನಗರ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ಸಂಜೆ ನಡೆದಿದೆ.
ನಗರ ನಿವಾಸಿ ಪುರೋಹಿತರಾದ ಸುಬ್ರಹ್ಮಣ್ಣ ನಾವುಡ ಹೊಸನಗರದಿಂದ ನಗರಕ್ಕೆ ಬೈಕ್ ನಲ್ಲಿ ಬರುವಾಗ ಈ ಘಟನೆ ನಡೆದಿದೆ. ಶೂಲದ ಗುಡ್ಡದ ಕಡೆಯಿಂದ ಬೈಕ್ ಮೇಲೆ ಚಿರತೆ ಜಿಗಿದಿದೆ. ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಜಿಗದು ಘರ್ಜಿಸಿದೆ. ಏನು ಮಾಡಲು ತೋಚದ ಬೈಕ್ ಸವಾರ ಬೈಕ್ ಹಾರ್ನ್ ಒತ್ತಿಕೊಂಡೇ ಕಿಟಾರನೇ ಕಿರುಚಲು ಶುರು ಮಾಡಿದ್ದಾರೆ. ಚಿರತೆಗೆ ಏನಾಯ್ತೋ ಗೊತ್ತಿಲ್ಲ.. ರಸ್ತೆಯ ಮತ್ತೊಂದು ದಿಬ್ಬಕ್ಕೆ ನೆಗೆದು ಮೆರೆಯಾಯಿತು.
ಕೇವಲ ಕೆಲವು ಸೆಕೆಂಡ್ ಗಳಲ್ಲಿ ನಡೆದ ಘಟನೆ ಇದು. ಕೇವಲ ಮೂರ್ನಾಲ್ಕು ಅಡಿ ಅಂತರದಲ್ಲಿ ನನ್ನನ್ನೆ ದಿಟ್ಟಿಸಿ ಚಿರತೆ ಘರ್ಜಿಸಿದ ರೀತಿ ಘೋರವಾಗಿತ್ತು. ಬಳಿಕ ಕೆಲವು ದೂರ ವಾಪಾಸಾದೆ. ಲಾರಿಯೊಂದು ಬರುತ್ತಿದ್ದು ಅದರ ಹಿಂದಿನಿಂದ ಬೈಕ್ ಚಲಾಯಿಸಿಕೊಂಡು ಮನೆ ಸೇರಿದೆ ಎನ್ನುತ್ತಾರೆ ಸುಬ್ರಹ್ಮಣ್ಯ ನಾವುಡ.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಅರಣ್ಯ ಇಲಾಖೆಗೆ ಮಾಹಿತಿ
ಚಿರತೆ ಕಾಣಿಸಿಕೊಂಡ ಕುರಿತಾಗಿ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಈಗಾಗಲೇ ಬಸವನಬ್ಯಾಣ, ಹಿಲ್ಕುಂಜಿ, ಅರೋಡಿ, ಹೆದ್ಲಿ ಸೇರಿದಂತೆ ನಗರ ಸುತ್ತಮುತ್ತ ಭಾಗದಲ್ಲಿ ಚಿರತೆ ಕಾಣಿಸಿಕೊಂಡ ಮಾಹಿತಿ ಹರಿದಾಡುತ್ತಿದೆ. ಅಲ್ಲದೇ ಮೂರ್ನಾಲ್ಕು ಜಾನುವಾರುಗಳನ್ನು ಚಿರತೆ ಎಳೆದುಕೊಂಡು ಹೋಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)