
6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಅಂಬ್ರಯ್ಯಮಠ
ಸರ್ವಾಧ್ಯಕ್ಷರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿದ ಜಿಲ್ಲಾ ಸಮಿತಿ


ಹೊಸನಗರ: 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಸಾಹಿತಿ, ಇತಿಹಾಸ ಸಂಶೋಧಕ ಅಂಬ್ರಯ್ಯಮಠ ಆಯ್ಕೆಯಾಗಿದ್ದು ಶುಕ್ರವಾರ ಅವರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಲಾಗಿದೆ
ಹೊಸನಗರದ ಕುವೆಂಪು ವಿದ್ಯಾಶಾಲೆಯ ಆವರಣದಲ್ಲಿ ಅಕ್ಟೋಬರ್ 21 ಮತ್ತು 22 ರಂದು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸರ್ವಾಧ್ಯಕ್ಷ ಅಂಬ್ರಯ್ಯಮಠದಿಂದ ಪರಿಷತ್ ನಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಕಾಧ್ಯಕ್ಷ ಎಚ್.ಎನ್.ಮಹಾರುದ್ರ, ಮಲೆನಾಡ ಸಾಹಿತ್ಯಿಕ ವಲಯದಲ್ಲಿ ಅಂಬ್ರಮಠ ಹೆಸರು ಚಿರಪರಿಚಿತ. ಅವರು ರಚಿಸಿರುವ ಇತಿಹಾಸ, ಪುರಾಣ ಕಾದಂಬರಿಗಳು ಮನೆಮಾತಾಗಿವೆ. ಹಿಂದಿನ ಸಮ್ಮೇಳದ ಸಂದರ್ಭದಲ್ಲೇ ಅವರ ಹೆಸರು ಕೇಳಿಬಂದಿತ್ತು. ಈ ಬಾರಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಡಿ.ವಿ.ರೇವಣಪ್ಪಗೌಡ, ಜಿಲ್ಲಾ ಸಾಹಿತ್ಯ ಸಮ್ಮೇಳನ ಹೊಸನಗರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ನಡುವೆ ಸಮ್ಮೇಳಧ್ಯಕ್ಷ ಗೌರವ ತಾಲೂಕಿನ ಅಂಬ್ರಯ್ಯಮಠರಿಗೆ ಸಂದಿರುವುದು ಇನ್ನಷ್ಟು ಹಿರಿಮೆ ಮೂಡಿಸಿದೆ ಎಂದರು.
ಸರ್ವಾಧ್ಯಕ್ಷ ಅಂಬ್ರಯ್ಯಮಠ, ಶರಣ ಸಾಹಿತ್ಯ ಜಿಲ್ಲಾ ಸಮ್ಮೇಳನ ಅಧ್ಯಕ್ಷತೆಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಪ್ರಶಸ್ತಿ ಸಮ್ಮಾನಗಳನ್ನು ಅರಸಿ ಹೋದವನಲ್ಲ. ಆದರೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರೀಕ್ಷೆ ಮೀರಿ ಗೌರವ ದೊರಕಿದೆ. ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ಬದುಕಿನ ಅವಿಸ್ಮರಣೀಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರ ವಿದ್ಯಾಸಂಸ್ಥೆ ಮತ್ತು ಗ್ರಾಮಸ್ಥರ ಪರವಾಗಿ ಮುಖ್ಯ ಶಿಕ್ಷಕ ವೈ ಕೃಷ್ಣಮೂರ್ತಿ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸಿದರು.
ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ಗ್ರಾಪಂ ಸದಸ್ಯ ವಿಶ್ವನಾಥ್, ಚನ್ನಬಸಪ್ಪ ಗೌಡರು, ಇಲಿಯಾಸ್, ವಿಶ್ವನಾಥ, ಹೆಚ್.ಆರ್.ದೇವೇಂದ್ರಪ್ಪ, ಹ.ರು.ಗಂಗಾಧರಯ್ಯ, ಎಡ್ವರ್ಡ್ ಡಿಸೋಜ, ಅಂಬ್ರಯ್ಯಮಠ ಕುಟುಂಬದವರು ಇದ್ದರು. ನಾರಾಯಣ ಕಾಮತ್ ಸ್ವಾಗತಿಸಿ, ಶ್ರೀಧರಶೆಟ್ಟಿ ವಂದಿಸಿದರು.
