
ಹೊಸನಗರ: ಜಿಲ್ಲೆಯ ಪ್ರತಿಷ್ಠಿತಿ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಸಾಲಿಗೆ ರೂ.27 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ದುಮ್ಮಾ ವಿನಯ ಕುಮಾರ್ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದರು.

ಅಮೃತಮಹೋತ್ಸವದ ಹೊಸ್ತಿಲಲ್ಲಿರುವ ಈ ಸೊಸೈಟಿಯು 40 ಗ್ರಾಮದ ವ್ಯಾಪ್ತಿಯಲ್ಲಿದೆ. 2603 ಸದಸ್ಯರು ಇದ್ದು ಅವರಿಂದ ಷೇರು ಬಂಡವಾಳ ಸುಮಾರು ರೂ.1.23 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ ಎಂದರು.
ಈ ಸಾಲಿನಲ್ಲಿ 943 ಸದಸ್ಯರಿಗೆ ವಿವಿಧ ರೂಪದಲ್ಲಿ ಒಟ್ಟು ರೂ.7.70 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಹೊಸಬರಿಗೆ 51 ಜನರಿಗೆ ರೂ.71 ಲಕ್ಷ ಸಾಲ ವಿತರಿಸಲಾಗಿದೆ ಎಂದರು.


ಗೊಬ್ಬರ ಕೀಟ ನಾಶಕ ವಹಿವಾಟಿನಲ್ಲಿ ಕಳೆದ ಸಾಲಿಗಿಂತ ರೂ50 ಲಕ್ಷ ಹೆಚ್ಚು ವಹಿವಾಟು ನಡೆದಿದ್ದು ಈ ಬಾರಿ ರೂ.8.57 ಕೋಟಿ ವ್ಯಾಪಾರ ವಹಿವಾಟು ನಡೆದಿದೆ ಎಂದು ಸಭೆಗೆ ತಿಳಿಸಿದರು.
ಲಾಭಾಂಶ ಬೇಡ ಎಂದ ಸದಸ್ಯರು :
ಈ ಬಾರಿ ಆಡಳಿತ ಮಂಡಳಿಯು ಶೇ.6 ಲಾಭಾಂಶ ವಿತರಿಸಲು ಯೋಜನೆ ಮಾಡಿತ್ತು. ಆದರೆ ಸರ್ವ ಸದಸ್ಯರೇ ಒಕ್ಕೊರಳಿನಿಂದ ಲಾಭಾಂಶದ ಹಣವನ್ನು ಕಟ್ಟಡ ನಿಧಿಗೆ ವರ್ಗಾಯಿಸುವಂತೆ ಒತ್ತಾಯ ಮಾಡಿದ್ದು, ಸದಸ್ಯರು ಸಂಘದ ಮೇಲೆ ಇಟ್ಟಿ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದರು.
ಪ್ರತಿಭಾ ಪುರಸ್ಕಾರ:
ವೈದ್ಯಕೀಯ ಶಿಕ್ಷಣದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಶಾರ್ವರಿ ಪಿ.ಎನ್. ಎಸ್ಸೆಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸೃಷ್ಠಿ, ನಿಹಾರ್, ರಶ್ಮಿ, ಧನುಷ್, ಗಗನ ಎಸ್ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಾದ ಕನ್ನಕಾ, ಭೂಮಿಕಾ, ಯಶಸ್ವಿ ಎಸ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಪಾಧ್ಯಕ್ಷ ಚಿನ್ನಪ್ಪ ಇದ್ದರು. ನಿರ್ದೇಶಕ ಗಂಗಾಧರ ನಾಯಕ್ ಸ್ವಾಗತಿಸಿದರು. ಗುಬ್ಬಿಗಾ ರವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೀರೇಂದ್ರ ಲೆಕ್ಕಪತ್ರ ವರದಿ ವಾಚಿಸಿದರು. ಹೂವಪ್ಪ ವಂದಿಸಿದರು.
ರೂ.1.23 ಕೋಟಿ ಶೇರು ಸಂಗ್ರಹ:
ಅಮೃತಮಹೋತ್ಸವದ ಹೊಸ್ತಿಲಲ್ಲಿರುವ ಈ ಸೊಸೈಟಿಯು 40 ಗ್ರಾಮದ ವ್ಯಾಪ್ತಿಯಲ್ಲಿದೆ. 2603 ಸದಸ್ಯರು ಇದ್ದು ಅವರಿಂದ ಷೇರು ಬಂಡವಾಳ ಸುಮಾರು ರೂ.1.23 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ.
ದುಮ್ಮ ವಿನಯಕುಮಾರ್, ಅಧ್ಯಕ್ಷರು
