
ಶಿವಮೊಗ್ಗ: ರಾಜ್ಯಮಟ್ಟದಲ್ಲಿ ಅಭಿವೃದ್ಧಿ ಮತ್ತು ಪ್ರಸಿದ್ಧಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಸೇವೆ ಮಾಡುವ ಸದಾವಕಾಶ ಸಿಕ್ಕಿದೆ ಇದನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮಿಥುನ್ ಕುಮಾರ್ (Mithun Kumar IPS) ಹೇಳಿದ್ದಾರೆ.
ಇಂದು ಕಚೇರಿಯಲ್ಲಿ ನಿರ್ಗಮಿತ ಎಸ್ಪಿ ಡಾ.ಲಕ್ಷ್ಮೀಪ್ರಸಾದ್ ರಿಂದ ಅಧಿಕಾರ ಸ್ವೀಕರಿಸಿದ ಅವರು, ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದ ದಿಗ್ಗಜರಿದ್ದಾರೆ. ಐತಿಹಾಸಿಕ ಕ್ಷೇತ್ರವಾಗಿ ಕೂಡ ಗಮನಸೆಳೆದ ಜಿಲ್ಲೆ ಎಂದರು.
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿತು ಕಾರ್ಯನಿರ್ವಹಿಸುವೆ. ಕಾನೂನು ಬಾಹಿರ ಚಟುವಟಿಗೆಗೆ ಅವಕಾಶವಿಲ್ಲ. ಜಿಲ್ಲೆಯ ಜನರು ಪ್ರಜ್ಞಾವಂತರಿದ್ದಾರೆ. ಎಲ್ಲರ ಸಹಕಾರ ಬಯಸುತ್ತೇನೆ ಎಂದಿದ್ದಾರೆ.
