ತಾಲ್ಲೂಕುಸಾಗರಹೊಸನಗರ

NITTUR: ಇಬ್ಬರು ಗ್ರಾಪಂ ಸದಸ್ಯರ ರಾಜೀನಾಮೆ ಅಂಗೀಕಾರ! ಅಧ್ಯಕ್ಷರ ಪ್ರದತ್ತ ಅಧಿಕಾರ ಚಲಾವಣೆ

ಹೊಸನಗರ: ಪಂಚಾಯ್ತಿಯ ನೀರುಗಂಟಿ ಕರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದು ಪರಿಹಾರ ನೀಡುವ ಸಂಬಂಧ ಮರುಪ್ರಸ್ತಾವನೆ ಸಲ್ಲಿಸಲು ಗ್ರಾಪಂ ಮುಂದಾಗಿದೆ ಎಂದು ಆರೋಪಿಸಿ ತಾಲೂಕಿನ ನಿಟ್ಟೂರು ಗ್ರಾಪಂಯ ಇಬ್ಬರು ಸದಸ್ಯರು ಈ ಹಿಂದೆ ರಾಜೀನಾಮೆ ನೀಡಿದ್ದರು.

ಗ್ರಾಪಂ ಅಧ್ಯಕ್ಷರು ಕೂಡ ಸದಸ್ಯರ ರಾಜೀನಾಮೆಯನ್ನು ಅಂಗೀಕರಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೌದು ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ನೀರುಗಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಜಿದ್ ಎಂಬುವವರು ಸಾವನ್ನಪ್ಪಿದ್ದರು. ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನುವ ಕಾರಣಕ್ಕಾಗಿ ಪರಿಹಾರಕ್ಕೆ ಗ್ರಾಪಂಯಿಂದ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಹಾರ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.
ಆದರೆ ಈಗ ಮತ್ತೆ ಈ ವಿಚಾರ ಸದ್ದು ಮಾಡಿದೆ. ಇದಕ್ಕೆ ಕಾರಣ ಪರಿಹಾರಕ್ಕಾಗಿ ಮರುಪ್ರಸ್ತಾವನೆ ಸಲ್ಲಿಸಲು ಗ್ರಾಪಂಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರಾದ ಪುರುಶೋತ್ತಮ ಶ್ಯಾನುಭೋಗ್, ಸ್ವರೂಪ ಉಡುಪ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮತ್ತೆ ಪ್ರಕರಣ ಜೀವ ಪಡೆದುಕೊಂಡಿದೆ.

ರಾಜೀನಾಮೆ ಅಂಗೀಕಾರ:
ನಿಟ್ಟೂರು ಗ್ರಾಪಂ ಅಧ್ಯಕ್ಷೆ ವಿನೋದ ಗುರುಮೂರ್ತಿ, ಇಬ್ಬರು ಸದಸ್ಯರು ರಾಜೀನಾಮೆಯನ್ನು ಪರಿಶೀಲಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಪ್ರಕರಣ ಸಂಖ್ಯೆ 43 ರಂತೆ, ತನ್ನ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಸದಸ್ಯರಾದ ಹೆಚ್.ಎಂ.ಪುರುಶೋತ್ತಮ, ಸ್ವರೂಪ ಬಿ.ಆರ್ ರಾಜೀನಾಮೆಯನ್ನು ನ.14 ರಂದು ಅಂಗೀಕರಿಸಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್ ಅವಗಾಹನೆಗೆ ಸಲ್ಲಿಸಿದ್ದಾರೆ.

ಗ್ರಾಪಂ ಸದಸ್ಯರ ರಾಜೀನಾಮೆ ಅಂಗೀಕಾರ ಹೇಗೆ ಗೊತ್ತಾ? ಪಂಚಾಯತ್ ರಾಜ್ ಕಾಯ್ದೆಯಲ್ಲೇನಿದೆ?

ಗ್ರಾಪಂ ಸದಸ್ಯರು ರಾಜೀನಾಮೆ ಸಲ್ಲಿಸಬೇಕಾದಲ್ಲಿ ಸದಸ್ಯನು ತನ್ನ ಸದಸ್ಯತ್ವಕ್ಕೆ ತನ್ನ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆ ಕೊಡಬಹುದು.

ಅಂತಹ ರಾಜೀನಾಮೆನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳು ಮುಕ್ತಾಯವಾದ ನಂತರ, ಸದರಿ 15 ದಿನಗಳ ಅವಧಿಯೊಳಗೆ ಆ ರಾಜೀನಾಮೆಯನ್ನು ತನ್ನ ಸಹಿ ಸಹಿತ ಅಧ್ಯಕ್ಷರಿಗೆ ಬರಹದಲ್ಲಿ ಬರೆದು ರಾಜೀನಾಮೆಯನ್ನು ಹಿಂತೆಗೆದು ಕೊಂಡಿರದ ಹೊರತು, ಸದಸ್ಯ ಸ್ಥಾನ ತೆರವಾಗ ತಕ್ಕದ್ದು. ನಂತರ ಅಧ್ಯಕ್ಷರು ರಾಜೀನಾಮೆ ಪತ್ರವನ್ನು ಗ್ರಾಮಪಂಚಾಯ್ತಿಯ ಮುಂದಿನ ಸಭೆಯಲ್ಲಿ ಮಂಡಿಸುವಂತೆ ಮಾಡತಕ್ಕದ್ದು.

ರಾಜೀನಾಮೆ ಯಾವಾಗ ಕೊಟ್ಟಿದ್ದು, ಯಾವಾಗ ಸ್ವೀಕರಿಸಿದ್ದು ಎನ್ಯುವುದು ಮುಖ್ಯವಲ್ಲ:

ಪಂಚಾಯತ್ ಅಧಿನಿಯಮದ ಪ್ರಕಾರ ನೋಡಿದರೆ ಸದಸ್ಯ ಯಾವಾಗ ರಾಜೀನಾಮೆ ಕೊಟ್ಟಿದ್ದಾರೆ ಅಥವಾ ಅಧ್ಯಕ್ಷರು ಯಾವಾಗ ಸ್ವೀಕರಿಸಿದ್ದಾರೆ ಎನ್ನುವುದಕ್ಕಿಂತ ರಾಜೀನಾಮೆ ಪತ್ರದಲ್ಲಿ ಸದಸ್ಯ ಯಾವ ದಿನಾಂಕ ದಾಖಲಿಸಿದ್ದಾನೆ ಎನ್ನುವುದು ಮುಖ್ಯ ಎನ್ನಬಹುದು.

ಸದಸ್ಯರು ರಾಜೀನಾಮೆ ಕೊಟ್ಟು ಪೇಚಿಗೆ ಸಿಲುಕಿದರಾ?

ಒಂದು ವೇಳೆ ಪಂಚಾಯ್ತಿಯಲ್ಲಿ ಅನ್ಯಾಯ ಆಗುತ್ತಿದೆ ಎಂಬ ಆರೋಪವಿದ್ದರೆ ಪಂಚಾಯ್ತಿ ಒಳಗಿದ್ದುಕೊಂಡೇ ಹೋರಾಟ ಮಾಡಬಹುದಿತ್ತು. ಆದರೆ ರಾಜೀನಾಮೆಯೇ ಪರಿಹಾರವಲ್ಲ. ಒಂದು ವೇಳೆ ಗಡಿಬಿಡಿಯಲ್ಲಿ ರಾಜೀನಾಮೆ ನೀಡಿದ್ದರೇ ಮನಸ್ಸು ಬದಲಿಸಿ ರಾಜೀನಾಮೆ ಪತ್ರ ವಾಪಾಸು ಪಡೆಯುವ ಅವಕಾಶವಿತ್ತು. ಆದರೆ ಅದು ರಾಜೀನಾಮೆ ಪತ್ರದಲ್ಲಿ ದಾಖಲಿಸಿದ ದಿನಾಂಕದಿಂದ 15 ದಿನಗಳ ಒಳಗೆ.

ಆದರೆ ನಿಟ್ಟೂರು ಗ್ರಾಪಂ ಇಬ್ಬರು ಸದಸ್ಯರ ರಾಜೀನಾಮೆಯನ್ನು ಅಧ್ಯಕ್ಷರು ಅಂಗೀಕರಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದರೆ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಅವಧಿ ಮುಗಿದಿರಬೇಕು. ಅವಧಿ ಮುಗಿಯದ ಹೊರತು ರಾಜೀನಾಮೆ ಅಂಗೀಕಾರ ಮಾಡುವ ಹಾಗಿಲ್ಲ ಎನ್ನಲಾಗಿದೆ. ಇನ್ನು ಬರಹದಲ್ಲಿ ಕೊಡಬೇಕು ಎಂದಿದೆ ಹೊರತು ಕೈಬರಹದಿಂದ ಅಂತೇನು ಇಲ್ಲ.

ನಿಟ್ಟೂರಿನ ಪರಿಹಾರ ತಗಾದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಜವಾಗಿ ರಾಜೀನಾಮೆ ಕೊಡಬೇಕೆಂದು ಕೊಟ್ಟರೋ.. ತಂತ್ರಗಾರಿಕೆಗೆ ಮುಂದಾದರೋ ಗೊತ್ತಿಲ್ಲ.. ಇಲ್ಲ ಪ್ರಕರಣಕ್ಕೆ ಗಂಭೀರತೆ ತಂದು ಆಮೇಲೆ ಹೇಗೂ ವಾಪಾಸು ಪಡೆಯುವ ಅವಕಾಶ ಇದೆ ಎಂದು ಭಾವಿಸಿ ರಾಜೀನಾಮೆ ಸಲ್ಲಿಸಿದರೋ.. ಅದು ಗೊತ್ತಿಲ್ಲ. ಒಟ್ಟಾರೆ ರಾಜೀನಾಮೆ ಅಂಗೀಕಾರವಾಗಿದೆ. ಇದು ಗ್ರಾಮದಲ್ಲಿ ಕುತೂಹಲದ ಚರ್ಚೆಗೆ ಕಾರಣವಾಗಿದೆ. ಮುಂದಿನ ಹೋರಾಟ ಏನೋ ಎಂಬುದನ್ನು ಸದಸ್ಯರೇ ಸ್ಪಷ್ಟಪಡಿಸಬೇಕು. ಆದರೆ ಗ್ರಾಪಂ ಸದಸ್ಯತ್ವ ಮಾತ್ರ ಕಳೆದುಕೊಂಡಿರುವುದು ಈ ಹೊತ್ತಿನ ಸತ್ಯ. ಮುಂದೇನು ಎಂಬುದು ಕಾದುನೋಡಬೇಕಷ್ಟೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *