
ಹೊಸನಗರ: ಬೆಂಗಳೂರಿನ ಜೆಬಿನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆ ಅಪಘಾತದಲ್ಲಿ ಮೃತನಾದ ಮೂಡುಗೊಪ್ಪ ನಗರ ಕೊಟ್ಟನಕೇರಿ ನಿವಾಸಿ ಆರೀಸ್ ಮನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದರು
ಈ ವೇಳೆ ಅಪಘಾತದ ಬಗ್ಗೆ, ಮತ್ತು ಮೃತ ಯುವಕ ಆರೀಸ್ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕುಟುಂಬಕ್ಕೆ ಸಾಂತ್ವನ ಹೇಳಿದರು.


ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಪ್ರಕ್ರಿಯೆ ಬೇಗ ಮುಗಿಸಿ ಶವವನ್ನು ಮೃತ ಕುಟುಂಬಕ್ಕೆ ನೀಡುವಂತೆ ಬುಧವಾರವೇ ಪೊಲೀಸರಿಗೆ ಸೂಚಿಸಿದ್ದರು.
ಮೃತ ಆರೀಶ್ ಶವ ನೋಡಿ ಸಂತಾಪ ಸೂಚಿಸಲು ಗುರುವಾರ ಮೃತನ ಮನೆಗೆ ಸಂಜೆ ಭೇಟಿ ನೀಡಿದರು. ಆದರೆ ಶವ ಬೆಂಗಳೂರಿನಿಂದ ಬರುವುದು ತಡವಾದ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದರು.
ಈ ವೇಳೆ ಪೊಲೀಸರ ಪ್ರಕ್ರಿಯೆಯಲ್ಲಿ ಸಹಾಯದ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಮಾಡುವಂತೆ ಕುಟುಂಬದವರಿಗೆ ತಿಳಿಸಿದರು.
ಈ ವೇಳೆ ಸಮುದಾಯದ ಪ್ರಮುಖರು, ಊರಿನ ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದರು.











