ತಾಲ್ಲೂಕುತೀರ್ಥಹಳ್ಳಿಹೊಸನಗರ

ಸಚಿವರೇ ಬನ್ನಿ.. ನಮ್ಮ ಅಳಲು ಆಲಿಸಿ.. ನಗರ ಬಿಜೆಪಿಯಲ್ಲಿ ಅಸಮಧಾನದ ಹೊಗೆ!

ಹೊಸನಗರ: ಕಾಂಗ್ರೆಸ್ ಹಾದಿಯಲ್ಲೇ ಸಾಗಿದ್ಯಾ ಬಿಜೆಪಿ?.. ಸ್ಥಳೀಯ ಪ್ರಮುಖರ ಅಸಮಧಾನ.. ತಟಸ್ಥ ಮನೋಭಾವದಿಂದ ನಗರ ಹೋಬಳಿಯಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಚುನಾವಣೆಯಲ್ಲಿ ಬಾರೀ ನಷ್ಟ ಅನುಭವಿಸಿತ್ತು.. ಇದೀಗ ಬಿಜೆಪಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆಯೇ.? ಎಂಬ ಅನುಮಾನಗಳಿಗೆ ಇತ್ತೀಚಿನ ಘಟನಾವಳಿಗಳು ಸಾಕ್ಷೀಕರಿಸುತ್ತಿವೆ.

ನಗರ ಹೋಬಳಿಯಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮಿದೆ. 2011 ರ ಜಿಪಂ, ತಾಪಂ ಚುನಾವಣೆಯಿಂದ ಹಿಡಿದು ಬಿಜೆಪಿ ಮುಟ್ಟಿದ್ದೆಲ್ಲ ಚಿನ್ನ ಅನ್ನುವಂತಾಗಿತ್ತು. ಜಿಪಂಯಲ್ಲಿ ಶುಭಾ ಕೃಷ್ಣಮೂರ್ತಿ ಬಳಿಕ ಸುರೇಶ ಸ್ವಾಮಿ‌ರಾವ್ ಜಯಗಳಿಸಿದ್ದರು. ತಾಪಂ‌ಯ ಮೂರು ಕ್ಷೇತ್ರದಲ್ಲೂ ಎರಡು ಬಾರಿಯೂ ಬಿಜೆಪಿ ಜಯಭೇರಿ ಭಾರಿಸಿತ್ತು. ನಂತರ ನಡೆದ ಶಾಸಕ ಸಂಸದರ ಚುನಾವಣೆಯಲ್ಲೂ ನಗರ ಹೋಬಳಿಯಲ್ಲಿ ಭರ್ಜರಿ ಲೀಡ್ ದೊರಕಿತ್ತು. ಒಟ್ಟಾರೆ ಇಡೀ ನಗರ ಹೋಬಳಿ ಬಿಜೆಪಿ ಮಯ ಎಂಬಷ್ಟರ ಮಟ್ಟಿಗೆ ಅಧಿಪತ್ಯ ಕಂಡು ಬಂದಿದೆ.

ಭುಗಿಲೇಳುತ್ತಿದೆ ಅಸಮಧಾನ.. ತೇಪೆ ಹಚ್ಚದಿದ್ದರೇ ಕಾದಿದೆ ಆಪತ್ತು:

ಹೌದು ನಗರ ಹೋಬಳಿಯ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಭುಗಿಲೇಳುತ್ತಿದೆ. ಹಿಂದೆ ಕಿಮ್ಮನೆ ರತ್ನಾಕರ್ ಸಚಿವರಾಗಿದ್ದ ಸಂಧರ್ಭದಲ್ಲಿ ಕಂಡು ಬಂದ ಸ್ಥಳೀಯ ಮುಖಂಡರ ಅಸಮಧಾನ.. ಭಿನ್ನಮತ ಇದೀಗ ಮಗ್ಗಲು ಬದಲಿಸಿ ರಾಜ್ಯ ಸರ್ಕಾರದ ಪ್ರತಿಷ್ಠಿತ ಖಾತೆ ಮುಡಿಗೇರಿಸಿಕೊಂಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರರ ಬಿಜೆಪಿಯಲ್ಲೂ ಕಾಣಿಸಿಕೊಳ್ಳುತ್ತಿದೆ.

ಅಸಮಧಾನಿತರ ಸಭೆ:
ಯಡೂರು ತುದಿಯಿಂದ ಹಿಡಿದು ನಿಟ್ಟೂರಿನ ತನಕ ಅಸಮಧಾನಿತರ ಪಟ್ಟಿ ದಿನಕಳೆದಂತೆ ಹೆಚ್ಚುತ್ತಲೇ.. ಇದೆ. ಈ ನಡುವೆ ಅಸಮಧಾನಿತರ ಸಭೆ ಕೂಡ ಅಲ್ಲಲ್ಲಿ ನಡೆಯುತ್ತಿರುವುದು ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಗಂಟೆಯಾಗುತ್ತಿದೆ.

ಸಚಿವರ ಮೇಲಿಲ್ಲ ಮುನಿಸು:
ಇತ್ತೀಚೆಗೆ 35 ರಿಂದ 40 ಬಿಜೆಪಿಯ ಸ್ಥಳೀಯ ಪ್ರಮುಖರು, ಕಾರ್ಯಕರ್ತರು ಒಳಗೊಂಡಂತೆ ಪ್ರತ್ಯೇಕ ಸಭೆ ನಡೆದಿದೆ. ವಿಶೇಷ ಎಂದರೆ ಸಭೆಯಲ್ಲಿ ಸಚಿವ ಆರಗ ಜ್ಞಾನೇಂದ್ರರ ಮೇಲೆ‌ ಮುನಿಸು ವ್ಯಕ್ತವಾಗುತ್ತಿಲ್ಲ.. ಬದಲಿಗೆ ಸ್ಥಳೀಯವಾಗಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಚ, ಹಾಲಿ‌ ಮ್ಯಾಮ್ಕೋಸ್ ಸದಸ್ಯ, ನಗರ ಬಿಜೆಪಿ ಮುಖಂಡರು ಕಂ ಪ್ರಥಮದರ್ಜೆ ಗುತ್ತಿಗೆದಾರ, ತಾಲೂಕು ಬಗರಹುಕುಂ ಸಮಿತಿ ಅಧ್ಯಕ್ಷರು, ನಗರದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ  ಮೇಲೆ ಅಸಮಧಾನ ವ್ಯಕ್ತವಾಗಿದ್ದು ಸಭೆಯಲ್ಲಿ ತೀವ್ರ ವಾಗ್ದಾಳಿಯನ್ನು ನಡೆದಿದೆ.

ಇನ್ನು ವಿಶೇಷ ಎಂದರೆ ಸಭೆಯಲ್ಲಿ ನಗರ ಹೋಬಳಿಯ ಪ್ರಭಾವಿ ಒಕ್ಕಲಿಗ, ಬ್ರಾಹ್ಮಣ, ಈಡಿಗ ಸಮುದಾಯದ, ಪ್ರಮುಖರು. ಎಪಿಎಂಸಿಯ ಮಾಜಿ ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷರುಗಳು, ಬೂತ್ ಮಟ್ಟದ ಹಾಲಿ ಮಾಜಿ ಪದಾಧಿಕಾರಿಗಳು, ಗ್ರಾಪಂ ಸದಸ್ಯರು ಸೇರಿದಂತೆ 40 ಕ್ಕು ಹೆಚ್ಚು ಪ್ರಮುಖರು ಭಾಗವಹಿಸಿರುವುದು ಪಕ್ಷದದೊಳಗಡೆ ತಲ್ಲಣಕ್ಕೆ ಕಾರಣವಾಗಿದೆ.

ಅಸಮಾಧಾನಕ್ಕೆ ಕಾರಣವೇನು?

ಪಕ್ಷದ ಆ ನಾಲ್ವರಿಂದ ನಮ್ಮ ಕಡೆಗಣನೆ, ಕೆಲಸ ಹಂಚಿಕೆಯಲ್ಲೂ ಆ ಮೂವರದ್ದೆ ನಿರ್ಧಾರ, ನಮ್ಮ ಭಾಗಕ್ಕೆ ಕೆಲಸವಿಲ್ಲ.. ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಸಚಿವರು ನಮಗೆ ಸ್ಪಂದಿಸದಂತೆ ತಂತ್ರ, ನಗರ ಅಧ್ಯಕ್ಷರು ಅವರ ಪಂಚಾಯ್ತಿ ವ್ಯಾಪ್ತಿಗೆ ಸೀಮಿತ. ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸದ, ಠಾಣೆಗೆ ಬಾರದ ವ್ಯಕ್ತಿಗಳಿಗೆ ಮಣೆ,  ನಮ್ಮನ್ನು ಉದ್ದೇಶಪೂರ್ವಕವಾಗಿ ದೂರ ಇಟ್ಟು, ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಆದಲ್ಲಿ ನಮ್ಮ ಮೇಲೆ ಗೂಬೆ ಕೂರಿಸುವ ಹುನ್ನಾರಕ್ಕೆ ಈಗಿಂದಲೇ ಚಾಲನೆ. ಇನ್ನಿಲ್ಲದ ಭರವಸೆ ಕೊಟ್ಟು ಪಕ್ಷಕ್ಕೆ ಕರೆತಂದವರ ಕಡೆಗಣನೆ, ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಅಸಮಾಧಾನದ ಸುರಿಮಳೆಯೇ ಹರಿದುಬಂದಿದೆ ಎನ್ನಲಾಗಿದೆ.

ಫ್ಲಡ್ ಗೆ ಬಂದ ಹಣ ಲೋಕೋಪಯೋಗಿ ರಸ್ತೆಗೆ ಬಳಕೆ!

ಫ್ಲಡ್ ಗೆ ಬಂದ ರೂ 4 ಕೋಟಿ ಹಣವನ್ನು ಗ್ರಾಮಗಳ ಮತ್ತು ರೈತರ ಸಂಕಷ್ಟಕ್ಕೆ ಬಳಸಿಕೊಳ್ಳದೇ ಸಚಿವರ ದಿಕ್ಕುತಪ್ಪಿಸಿ ಲೋಕೋಪಯೋಗಿ ರಸ್ತೆಗೆ ಬಳಸಿರುವುದು. ಬೇಕಾದವರಿಗೆ ಮಾತ್ರ ಕೆಲಸ, ಪಕ್ಷಕ್ಕಾಗಿ ದುಡಿಯೋದು ಯಾರೋ.. ಅಧಿಕಾರಕ್ಕೆ ಬಂದಾಗ ಲಾಭ ಮಾಡಿಕೊಳ್ಳೋದು ಇನ್ಯಾರೋ.. ಹೀಗೆ ಸಾಲು ಸಾಲು ಆರೋಪಗಳು ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.

ಸಚಿವರ ಮೇಲಾಗಲಿ.. ಬಿಜೆಪಿ ಪಕ್ಷದ ಬಗ್ಗೆಯಾಗಲಿ ಅಸಮಧಾನವಿಲ್ಲ:

ಹಾಗಂತ ಸಚಿವರ ಮೇಲಾಗಲಿ ಬಿಜೆಪಿ ಪಕ್ಷದ ಮೇಲಾಗಲಿ ಅಸಮಧಾನವಿಲ್ಲ. ಆದರೆ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಅದಕ್ಕು ಕೂಡ ತಡೆಮಾಡಲಾಗುತ್ತಿದೆ. ನಗರ ಹೋಬಳಿಯಲ್ಲಿ ಏನಾಗುತ್ತಿದೆ ಎಂಬುದು ಸಚಿವರ ಗಮನದಲ್ಲಿ ಇಲ್ಲ. ಸಚಿವರು ಬರಬೇಕು ನಮ್ಮ ನೋವನ್ನು ಕೇಳಬೇಕು ಎಂದು ಸಭೆಯಲ್ಲಿ ಬೇಡಿಕೆ ಇಡಲಾಗಿದೆ.

ಈ ಹಿಂದೆ ಕಾಂಗ್ರೆಸ್ ನಲ್ಲಿ ಕಿಮ್ಮನೆ ರತ್ನಾಕರ್ ಸಚಿವರಾದ ಸಂಧರ್ಭದಲ್ಲಿ ನಗರ ಕಾಂಗ್ರೆಸ್ ಪಕ್ಷದಲ್ಲಿ ಇದೇ ರೀತಿಯ ಅಸಮಾಧಾನ ಭುಗಿಲೆದ್ದಿತ್ತು. ಆಗ ಬಿಜೆಪಿ ಕ್ರಿಯಾಶೀಲವಾಗಿದ್ದು ಪಕ್ಷದ ಒಳಬೇಗುದಿಯ ಲಾಭ ಪಡೆಯಲು ಯಶಸ್ವಿಯಾಗಿತ್ತು. ಈ‌ಬಾರಿ ಬಿಜೆಪಿಯಲ್ಲಿ ಅದೇ ವಾತಾವರಣ ಸೃಷ್ಟಿಯಾಗಿದೆ. ಆದರೆ ಲಾಭ ಪಡೆದುಕೊಳ್ಳುವ ಸಾಧ್ಯತೆ ಇದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಸಂಘಟನೆಯಾಗಲಿ.. ಕ್ರಿಯಾಶೀಲತೆಯಾಗಲಿ ಕಂಡು ಬರದಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್.

 

ಗಮನಕ್ಕೆ ಬಂದಿಲ್ಲ:

ನಗರದಲ್ಲಿ ಬಿಜೆಪಿ ಅಸಮಾಧಾನಿತರ ಸಭೆ ನಡೆದ ಮಾಹಿತಿ ಇಲ್ಲ. ಪಕ್ಷ ಎಂದ ಮೇಲೆ ಸಣ್ಣಪುಟ್ಟ ಅಸಮಾಧಾನಗಳು ಸಹಜ. ಅಂತಹ ಸಮಸ್ಯೆಗಳು ಇದ್ದಲ್ಲಿ ವರಿಷ್ಠರ ಗಮನಕ್ಕೆ ತರಲಾಗುವುದು. ವರಿಷ್ಠರು ಈಬಗ್ಗೆ ಗಮನ ಹರಿಸುತ್ತಾರೆ.  – – ಎನ್.ವೈ.ಸುರೇಶ್, ಅಧ್ಯಕ್ಷರು ಬಿಜೆಪಿ ಶಕ್ತಿ ಕೇಂದ್ರ

ಸಭೆ ನಡೆದಿರುವುದು ನಿಜ:

ಸಭೆ ನಡೆದಿರುವುದು ನಿಜ. ಆದರೆ ಸಚಿವರ ಬಗ್ಗೆಯಾಗಲಿ, ಬಿಜೆಪಿ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ಸ್ಥಳೀಯವಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಾರ್ಯಕರ್ತರಿಗೆ ಬೇಸರ ಇದೆ. 30-35 ವರ್ಷದಿಂದ ಪಕ್ಷದಲ್ಲಿ ದುಡಿದವರನ್ನು ಕಡೆಗಣನೆ ಮಾಡುವುದು ಸರಿಯಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂಬ ವಿಶ್ವಾಸವಿದೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ  ಕಾರ್ಯಕ್ರಮ ರೂಪಿಸಬೇಕು

ಕಣ್ಕಿ ಮಹೇಶ್, ಮಾಜಿ ಸದಸ್ಯರು, ಎಪಿಎಂಸಿ

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *