Homeತೀರ್ಥಹಳ್ಳಿಹೊಸನಗರ

ಜೋಡೆತ್ತುಗಳಿಗೆ ಆರಗ ಠಕ್ಕರ್ | ಕ್ಷೇತ್ರದೆಲ್ಲೆಡೆ ಬಿರುಸಿನ ಓಡಾಟ | ಆದರೆ ತಲೆನೋವು ತಂದ ಕೆಳಹಂತದ ಮುಖಂಡರ ಅಸಮಧಾನ!

ಜೋಡೆತ್ತುಗಳಿಗೆ ಠಕ್ಕರ್ ಕೊಡಲು ಆರಗ ಸಜ್ಜು| ಆದರೆ ತಳಮಟ್ಟದ ಮುಖಂಡರ ಅಪಸ್ವರ ತಂದ ತಲೆನೋವು |

ಶಿವಮೊಗ್ಗ: ಈಬಾರಿ ಕ್ಷೇತ್ರಕ್ಕೆ ಹಿಂದೆಂದು ತಂದಿರದ ಬರೋಬ್ಬರಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದೇನೆ.. ಅಭಿವೃದ್ಧಿ ನೋಡಿ ಜನ ಈಬಾರಿ ಕೂಡ ಜನ ಕೈಬಿಡುವುದಿಲ್ಲ ಎಂಬ ವಿಶ್ವಾಸ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಗೃಹ ಸಚಿವ ಆರಗ ಜ್ಞಾನೇಂದ್ರರದ್ದಾಗಿದೆ.

ಬಿರುಸಿನ ಪ್ರಚಾರ ಕೈಗೊಂಡಿರುವ ಅವರು ಬೂತ್ ಬೂತ್ ಮಟ್ಟದಲ್ಲಿ ಅಭಿವೃದ್ಧಿ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತ.. ಈ ಅಭಿವೃದ್ಧಿ ಪರ್ವದ ಮಾಹಿತಿಯನ್ನು ಮನೆಮನೆಗೆ ತಲುಪಿಸಿ ಎಂದು ಮನವಿ ಕೂಡ ಮಾಡುತ್ತಿದ್ದಾರೆ.

ತಳಮಟ್ಟದ ಮುಖಂಡರದ್ದೆ ಚಿಂತೆ:
ಕಾಂಗ್ರೆಸ್ ನಲ್ಲಿ ಕಿಮ್ಮನೆ ಮಂಜುನಾಥಗೌಡರು ಒಟ್ಟಾಗಿದ್ದರು ಆ ಬಗ್ಗೆ ಜ್ಞಾನೇಂದ್ರ ಹೆಚ್ಚೇನು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ತಳಮಟ್ಟದ ಬಿಜೆಪಿ ಮುಖಂಡರಲ್ಲಿ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿರುವುದು ಆರಗರ ಬೇಸರಕ್ಕು ಕಾರಣವಾಗಿದೆ ಎನ್ನಲಾಗಿದೆ. ಅದು ಸಹಜ ಕೂಡ ಗೃಹಸಚಿವರಾಗಿದ್ದರು ಕೂಡ ಕ್ಷೇತ್ರವನ್ನು ಕಡೆಗಣಿಸದೇ ಪಕ್ಷದ ಮುಖಂಡರು ಕೊಟ್ಟ ಮನವಿಯನ್ನೆಲ್ಲ ಪುರಸ್ಕರಿಸಿ, ಶ್ರಮವಹಿಸಿ ಅನುದಾನ ತಂದು ಅಭಿವೃದ್ಧಿಗೆ ಸಹಕರಿಸಿದರು ಕೂಡ ಅಪಸ್ವರ ಏಕೆ ಎಂಬ ಪ್ರಶ್ನೆ ಪಕ್ಷದ ಸ್ಥಳೀಯ ಪ್ರಮುಖರುಗಳಿಗೆ ಕೇಳುತ್ತಿದ್ದಾರೆ. ನಾನ್ ಇನ್ನೂ ಏನ್ ಮಾಡಬೇಕು ಮರಾಯ.?. ಅನ್ನುತ್ತಿದ್ದಾರೆ.

ಆರಗ ಮೇಲೆ ಸಾಫ್ಟ್ ಕಾರ್ನರ್:
ಅಧಿಕಾರಕ್ಕೆ ಬಂದಾಗ ಅಸಮಾಧಾನ ಸಹಜ. ಆದರೆ ಪ್ರತಿ ಗ್ರಾಮಗಳಿಗೆ ಪ್ರಮುಖರ ಮನವಿ ಆಧಾರದ ಮೇಲೆ ಭರಪೂರ ಅನುದಾನ ನೀಡಿದರು ಕೂಡ ಪಕ್ಷದ ತಳಹಂತದ ಮುಖಂಡರು ಅಸಮಧಾನಗೊಂಡು ತಟಸ್ಥವಾಗಿ ಉಳಿಯುತ್ತಿರುವುದು ಪಕ್ಷವನ್ನು ಆತಂಕಕ್ಕೆ ದೂಡಿದೆ. ಹಾಗಂತ ಅಸಮಾಧಾನಿತರು ಯಾರೊಬ್ಬರು ಸಚಿವ ಆರಗ ಮೇಲೆ‌ ಮುನಿಸು ಹೊಂದಿಲ್ಲ. ಇದು ಆರಗರಿಗೂ ತಿಳಿದಿದೆ. ಬದಲಿಗೆ ಸ್ಥಳೀಯ ಮುಖಂಡರ ಕಾರ್ಯವೈಖರಿ, ಕೆಲಸ ಹಂಚಿಕೆಯಲ್ಲಿ ಕಡೆಗಣನೆ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಈ ಹಿಂದೆ ನಗರ ಹೋಬಳಿಯಲ್ಲಿ 30 ಕ್ಕು ಹೆಚ್ಚು ಜನರು ಪ್ರತ್ಯೇಕ ಸಭೆ ನಡೆಸಿ ಆಕ್ರೋಶ ಹೊರಹಾಕಿದ್ದು ಬಾರೀ ಸುದ್ದಿಯಾಗಿತ್ತು.

ಪಕ್ಷಕ್ಕಾಗಿ ದುಡಿದರು ಕೂಡ ನಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ. ಜ್ಞಾನೇಂದ್ರಣ್ಣರ ಮೇಲೆ ಅಭಿಮಾನವಿದೆ. ಆದರೆ ಇಲ್ಲಿ ಕೆಲವೇ ಜನರ ಗುಂಪು ನಮ್ಮನ್ನು ಹತ್ತಿಕ್ಕುತ್ತಿದೆ. ಗ್ರಾಮಗಳಲ್ಲಿ ಕೆಲಸ ಹಂಚಿಕೆ ಮಾಡುವಾಗ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಗುತ್ತಿಗೆದಾರರೇ ಪಕ್ಷದ ಪ್ರಮುಖರಾಗುತ್ತಾರೆ. ಅವರೇ ಕೆಲಸ ಹಂಚುತ್ತಾರೆ.. ಅವರೇ ಕೆಲಸ ಮಾಡುತ್ತಾರೆ. ಮಾತ್ರವಲ್ಲ ಅಧಿಕಾರದ ಭರಪೂರ ಲಾಭ ಪಡೆದಿದ್ದಾರೆ. ಪಕ್ಷದ ನಿರ್ಣಯಗಳೆಲ್ಲವೂ ಅವರುಗಳ ಅಣತಿಯಂತೆಯೇ ನಡೆಯುತ್ತಿದೆ. ಮಾತನಾಡಬೇಕಾದ ಪಕ್ಷದ ಪ್ರಮುಖರು ಅಸಹಾಯಕರಾಗಿದ್ದಾರೆ ಏನು ಮಾಡೋದು ಎಂದು ತಮ್ಮ ನೋವನ್ನು ಹೊರಹಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಆರಗ ಖುದ್ದು ಎಂಟ್ರಿ:
ಈ ಬಾರಿಯ ಚುನಾವಣೆ ಹಿಂದಿನಂತಲ್ಲ. ಒಂದೊಂದು‌ ಮತಗಳು ಕೂಡ ನಿರ್ಣಾಯಕ. ಇದನ್ನು ಮನಗಂಡ ಆರಗ ಜ್ಞಾನೇಂದ್ರ ಅಸಮಾಧಾನಿತ ಮುಖಂಡರನ್ನು ಸಂಪರ್ಕಿಸಿ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದು ಯಶಸ್ವಿ ಕೂಡ ಆಗಿದ್ದಾರೆ ಎನ್ನಲಾಗಿದೆ.

ಕಳೆದಬಾರಿ‌ ಬಿಜೆಪಿ ನಿರೀಕ್ಷೆಗೂ ಮೀರಿ 67 ಸಾವಿರಕ್ಕು ಹೆಚ್ಚು ಮತಗಳಿಸಿತ್ತು. ಆರಗ ಜ್ಞಾನೇಂದ್ರ ಪ್ರಚಂಡ ವಿಜಯ ಸಾಧಿಸಿ ಸರ್ಕಾರದಲ್ಲಿ ಗೃಹಸಚಿವರಾಗುವ ಮೂಲಕ ಇನ್ನಷ್ಟು ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಾರಿ ನೇರ ಹಣಾಹಣಿ ನಡೆಯುವ ಸಾಧ್ಯತೆ ಹೆಚ್ವಿದ್ದು ಗೆಲ್ಲಬೇಕಾದರೆ ಆರಗ ಈಬಾರಿ ಕಳೆದ ಬಾರಿ ಪಡೆದ 67 ಸಾವಿರಕ್ಕೆ ಇನ್ನು 15 ರಿಂದ 20 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ಪಡೆಯುವುದು ಅಗತ್ಯ. ಹಳೇ ಮತಗಳನ್ನು ಉಳಿಸಿಕೊಳ್ಳುವ ಜೊತೆಗೆ ಹೊಸ‌ಮತದಾರರನ್ನು ಸೆಳೆಯುವ ಸವಾಲು ಆರಗ ಜ್ಞಾನೇಂದ್ರರ ಮುಂದಿದೆ. ಅದನ್ನು ದಿಟ್ಟವಾಗಿ ಎದುರಿಸಲು ಕೂಡ ಅವರು ಸಿದ್ದವಾಗಿದ್ದಾರೆ.

ಅಸಮಾಧಾನ ಬಗೆಹರಿಸಲಾಗಿದೆ:
ಕುಟುಂಬ ಎಂದಮೇಲೆ ಸಣ್ಣಪುಟ್ಟ ಅಸಮಧಾನ ನಿಜ. ಈಗಾಗಲೇ ಬಹುತೇಕ ಅಸಮಾಧಾನವನ್ನು ಬಗೆಹರಿಸಲಾಗಿದೆ. ಮಾಡಿದ ಅಭಿವೃದ್ಧಿ ಕೆಲಸಗಳು ಜನ ಮನಗೆದ್ದಿವೆ. ಹೋದಲೆಲ್ಲಾ ಜನರು ತಮ್ಮ ಅಭಿಮಾನ ತೋರುತ್ತಿದ್ದಾರೆ. ಇದಕ್ಕೆ ಇತಿಹಾಸ ಕಂಡರಿಯದ ಅನುದಾನ ತಂದಿರುವುದೇ ಕಾರಣ
-ಆರಗ ಜ್ಞಾನೇಂದ್ರ, ಗೃಹ ಸಚಿವರು

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *