
ಕಾಚಿನಕಟ್ಟೆಯಲ್ಲಿ ಹೆಬ್ಬಾವು ಪ್ರತ್ಯಕ್ಷ : ರಾತ್ರಿ ಕಾರ್ಯಾಚರಣೆಯಲ್ಲಿ 8 ಅಡಿ ಉದ್ದದ ಹೆಬ್ಬಾವು ಸೆರೆಹಿಡಿದ ಉಂಬ್ಳೇಬೈಲು ಅರಣ್ಯ ಇಲಾಖೆ
ಶಿವಮೊಗ್ಗ: ರಾತ್ರಿ ಪ್ರತ್ಯಕ್ಷಗೊಂಡ ಹೆಬ್ಬಾವನ್ನು ಉಂಬ್ಳೇಬೈಲು ಅರಣ್ಯ ಇಲಾಖೆಯ ತಂಡ ರಾತ್ರಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ ಘಟನೆ ಕಾಚಿನಕಟ್ಟೆ ಬಳಿ ನಡೆದಿದೆ.


ಕಾಚಿನಕಟ್ಟೆ ಗ್ರಾಮದ ಜಮೀನು ಒಂದರಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಉಂಬ್ಳೇಬೈಲು ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಕರೀಮ್ ನೇತೃತ್ವದ ತಂಡ ರಾತ್ರಿಯೇ ಕಾರ್ಯಾಚರಣೆ ನಡೆಸಿದೆ. ಉರಗ ತಜ್ಞ ಅರುಣ ಕಾಚಿನಕಟ್ಟೆ, ಸಹಾಯಕ ಸುನಿಲ್ ರೊಂದಿಗೆ ಸೇರಿ ಹೆಬ್ಬಾವನ್ನು ಸೆರೆ ಹಿಡಿದಿದೆ.
ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬಳಿಕ ಭದ್ರಾ ಅರಣ್ಯ ವ್ಯಾಪ್ತಿಗೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ವನಪಾಲಕ ರಾಜಶೇಖರ್, ಅರಣ್ಯ ವೀಕ್ಷಕ ಲಕ್ಚ್ಮಣ್, ಚಾಲಕ ಸುದರ್ಶನ ಭಾಗವಹಿಸಿದ್ದರು.
