
-
ವಿಜಯದಶಮಿ ಅಂಗವಾಗಿ ದೇವಸ್ಥಾನಗಳಿಗೆ ಹೂ ಕೊಡುಗೆ |10 ದೇಗುಲಗಳಿಗೆ 10 ಕ್ವಿಂಟಾಲ್ ಚೆಂಡು ಹೂವಿನ ಸೇವೆ | ಸೌಹಾರ್ದತೆ ಮೆರೆದ ಮುಸ್ಲೀಂ ಸಹೋದರರಿಗೆ ಧರ್ಮ ರಕ್ಷಾ ಸಮಿತಿ ಅಭಿನಂದನೆ
ಆನಂದಪುರ(ಸಾಗರ): ಸರ್ ನಮಸ್ತೆ.. ನಾನು ತರ್ಫೋಜ್ ಮಾತಾಡ್ತಿರೋದು ಎಲ್ಲ ದೇವಸ್ಥಾನಗಳಿಗೆ ಒಂದಿಷ್ಟು ಹೂವನ್ನ ಕೊಡಬೇಕು ಅಂತ ಅನ್ಕೊಂಡಿದ್ದೀನಿ . ಹಾಗೂ ಈಗಾಗಲೇ ಮಾರಿಕಾಂಬ ದೇವಸ್ಥಾನಕ್ಕೆ ಒಂದು ಕ್ವಿಂಟಲ್ ಹೂವನ್ನು ಕೊಟ್ಟಿದ್ದೀನಿ.. ಇನ್ನು ಕೊಡ್ತೀನಿ ಸರ್..
ಅ ಧ್ವನಿ ಕೇಳಿದ ಬಿ.ಡಿ.ರವಿ ಮತ್ತು ಪತ್ರಿಕಾ ಮಿತ್ರ ಮಲ್ಲಿಕಾರ್ಜುನ್ ಎರಡು ದಿನದ ಹಿಂದೆಯಷ್ಟೇ ಆಚಾಪುರದ ಹಳ್ಳೂರಿನಲ್ಲಿ ತರ್ಫೋಜ್ ಬೆಳೆದಿರುವ ಚೆಂಡು ಹೂವು ಮತ್ತು ಆತನ ಸಾಧನೆಯ ಬಗ್ಗೆ ವರದಿ ಮಾಡಿದ್ದರು.


ಎರಡೇ ದಿನದಲ್ಲಿ ಆತ ಫೋನ್ ಮಾಡಿ ನವರಾತ್ರಿ ಕೊನೆಯ ದಿನ ಹೂವುಗಳನ್ನ ಕೊಡುತ್ತೇನೆ ಸರ್ ದಯಮಾಡಿ ಅವುಗಳನ್ನು ದೇವಸ್ಥಾನಕ್ಕೆ ತಲುಪಿಸಲು ಸಹಾಯ ಮಾಡಲು ಕೋರಿದ್ದರು.
ಒಂದೆಡೆ ನವರಾತ್ರಿ ಎಂದರೆ ಹೂವುಗಳ ಅಲಂಕಾರ.. ಎಷ್ಟಿದ್ದರು ಚೆಂದ.. ಮತ್ತೊಂದೆಡೆ ಧರ್ಮಸೌಹಾರ್ದತೆ ಮೆರೆಯಲು ಮುಂದಾದ ತರ್ಫೋಜ್.. ಕೂಡಲೇ ಕಾರ್ಯಪ್ರವೃತ್ತರಾದ ರವಿಕುಮಾರ್, ಧರ್ಮರಕ್ಷಾ ಸಮಿತಿಯ ಅಧ್ಯಕ್ಷರಾದ ಉದಯ್ ಉದಯ್ ದೇಶಪಾಂಡೆಗೆ ಈ ವಿಷಯ ಮುಟ್ಟಿಸಿದ್ದಾರೆ.
ಹೂವಿನ ಸಹಕಾರಕ್ಕೆ ಸಹಮತ ವ್ಯಕ್ತವಾಗುತ್ತಿದ್ದಂತೆ ಒಂದು ಆಟೋ ತುಂಬಾ ಚೆಂಡು ಹೂ ತುಂಬಿಕೊಂಡು ಬಂದಿದ್ದರು. ಆಟೋದಲ್ಲಿ ತರ್ಪೋಜ್ ಬದಲಿಗೆ ಆತನ ಸಹೋದರ ಮಹಮ್ಮದ್ ನಯಾಜ್ ಅಹ್ಮದ್ ಜವಾಬ್ದಾರಿ ಹೊತ್ತಿದ್ದರು.
10 ಕ್ವಿಂಟಾಲ್ ಹೂವು ಸಮರ್ಪಣೆ:
ಮುಸ್ಲೀಂ ಸಹೋದರರ ಆಶಯದಂತೆ ಅಶೋಕ ರಸ್ತೆಯಲ್ಲಿರುವ ಬಾಲಸುಬ್ರಹ್ಮಣ್ಯ ದೇವಸ್ಥಾನ. ರಂಗನಾಥ ಬೀದಿಯ ತುಳಜಾಭವಾನಿ, ಬಿಎಚ್ ರಸ್ತೆಯಲ್ಲಿರುವ ಶ್ರೀ ಗುತ್ಯಮ್ಮ ದೇವಿ ದೇವಸ್ಥಾನ, ಬಸವನ ಬಿದಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ, ಸಂತೆ ಮಾರ್ಕೆಟ್ ನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ದಾಸಕೊಪ್ಪದ ಪಾಂಡುರಂಗ ದೇವಸ್ಥಾನ, ಬಸವಣ್ಣನ ದೇವಸ್ಥಾನ..ರಂಗನಾದ ಬೀದಿಯ ಎಲ್ಲಮ್ಮನ ದೇವಸ್ಥಾನ, ರಾಮ ಮಂದಿರ ಹಾಗೂ ರಂಗನಾಥ ಸ್ವಾಮಿ ದೇವಸ್ಥಾನಗಳಿಗೆ ತಲಾ ಮೂರ್ನಾಲ್ಕು ಚೀಲದಲ್ಲಿ ಚೆಂಡೂವು ತುಂಬಿದ ಚೀಲಗಳನ್ನ ತಲುಪಿಸಲಾಯಿತು. ಸುಮಾರು 10 ಕ್ವಿಂಟಾಲ್ ಹೂವುಗಳನ್ನು ದೇವರ ಅಲಂಕಾರಕ್ಕೆ ಉಚಿತವಾಗಿ ಸಮರ್ಪಿಸಲಾಯಿತು.
ಈ ರೀತಿಯಾಗಿ ಮುಸ್ಲಿಂ ಸಹೋದರರು ನವರಾತ್ರಿಯ ವಿಜಯದಶಮಿಯ ದಿನದಂದು ಹೂವುಗಳನ್ನು ದೇವಾಲಯಗಳಿಗೆ ನೀಡುವುದರ ಮೂಲಕ ಸೌಹಾರ್ದತೆ ಮೆರೆದರು.
ಅಭಿನಂದನೆ:
ಸೌಹಾರ್ದತೆ ಮೆರೆದ ಮುಸ್ಲೀಂ ಸಹೋದರರಿಗೆ ಧರ್ಮರಕ್ಷಾ ಸಮಿತಿಯಿಂದ ನವರಾತ್ರಿಯ ಸಿಹಿ ನೀಡಿ ಅಭಿನಂದಿಸಲಾಯಿತು.
ಈವೇಳೆ ಧರ್ಮರಕ್ಷಾ ಸಮಿತಿಯ ಅಧ್ಯಕ್ಷರಾದ ಉದಯ್ ದೇಶಪಾಂಡೆ. ರವಿಕುಮಾರ್ ಬಿಡಿ. ವಿಕಾಶ್ ನಾಯಕ್ .ಗುರುಪ್ರಸಾದ್, ಮಹಮ್ಮದ್ ನಯಾಜ್ ಅಹ್ಮದ್ ಇತರರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
-
ಸೌಹಾರ್ದತೆಯ ಪ್ರತೀಕ: ಹಿಂದೂಗಳಿಗೆ ನವರಾತ್ರಿ ಸಂಭ್ರಮ.. ಸಂಭ್ರಮಕ್ಕೆ ಮುಸ್ಲೀಂ ಸಹೋದರರು ನೀಡಿದ ಹೂವಿನ ಕೊಡುಗೆ ಸೌಹಾರ್ದತೆಯ ಪ್ರತೀಕ. ನಮ್ಮೂರಿನ ನವರಾತ್ರಿ ವಿಜಯದಶಮಿ ಆಚರಣೆಗೆ ಈ ಸೌಹಾರ್ದ ಮನೋಭಾವ ಮತ್ತು ಸೇವೆ ಕಳೆಗಟ್ಟಿದ ಅನುಭವ. ದೇವರು ಅವರನ್ನು ಹರಸಲಿ
-
ಬಿ.ಡಿ.ರವಿಕುಮಾರ್, ಆನಂದಪುರ
