
-
ಹೊಸನಗರದಲ್ಲಿ ಸಂಭ್ರಮದ ಭೂಮಿಹುಣ್ಣಿಮೆ
ಹೊಸನಗರ: ತಾಲೂಕಿನಾಧ್ಯಂತ ಭೂಮಿಹುಣ್ಣಿಮೆ ಆಚರಣೆಯನ್ನು ಸಂಪ್ರದಾಯದಂತೆ ಆಚರಿಸಲಾಯಿತು.
ಪಟ್ಟಣ ಸೇರಿದಂತೆ ವಾರಂಬಳ್ಳಿ, ಕೋಡೂರು, ಸೊನಲೆ, ಗೇರುಪುರ, ನಗರ, ನಿಟ್ಟೂರು, ಮಾಸ್ತಿಕಟ್ಟೆ, ಯಡೂರು, ಕರಿನಗೊಳ್ಳಿ, ಮಾರುತಿಪುರ ಸೇರಿದಂತೆ ವಿವಿಧ ಭಾಗದಲ್ಲಿ ಇಂದು ಬೆಳಿಗ್ಗೆ ಭೂಮಿಹುಣ್ಣಿಮೆ ವಿಶೇಷ ಪೂಜೆ ನೆರವೇರಿಸಿದರು.



ರಾತ್ರಿಯಿಂದಲೇ ತಯಾರಿ ನಡೆಸಿದ್ದ ರೈತರು ನಸುಕಿನಜಾವ ತಮ್ಮ ಜಮೀನುಗಳಿಗೆ ತೆರಳಿ, ಬೆಳೆದುನಿಂತ ಬೆಳೆಗೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅಡಿಕೆ ತೋಟಗಳಿಗೂ ಪೂಜೆ ಮಾಡಲಾಯಿತು.
ಭೂಮಿತಾಯಿಗೆ ಕಡುಬು ಸೇರಿದಂತೆ ವಿವಿಧ ತಿನಿಸುಗಳನ್ನು ಅರ್ಪಿಸಿ ನಂತರ ಅಲ್ಲೇ ಕುಟುಂಬ ಸಮೇತ ಪ್ರಸಾದ ಸ್ವೀಕರಿಸಿ ವಾಪಾಸಾದರು. ಕೆಲವು ಭಾಗದಲ್ಲಿ ಗದ್ದೆಗಳಲ್ಲೇ ಮಂಟಪ ಮಾಡಿ, ತಳಿರು ತೋರಣದಿಂದ ವಿಶೇಷ ಅಲಂಕಾರ ಮಾಡಲಾಗಿತ್ಕ
