
-
ಶಿವಮೊಗ್ಗ | ರೈಲ್ವೇ ನಿಲ್ದಾಣದ ಎದುರು ಅನುಮಾನಾಸ್ಪದ ಬಾಕ್ಸ್ ಗಳು ಪತ್ತೆ | ಆತಂಕ ಮೂಡಿಸಿದ ಪ್ರಕರಣ | ಬೆಂಗಳೂರಿನಿಂದ ಬಂದ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ
ಶಿವಮೊಗ್ಗ:ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಎರಡು ಕಬ್ಬಿಣದ ಪೆಟ್ಟಿಗೆಗಳು ಆತಂಕವನ್ನ ಸೃಷ್ಠಿ ಮಾಡಿದ್ದು ಬೆಂಗಳೂರಿನಿಂದ ಬಾಂಬ್ ಸ್ಕ್ವಾಡ್ ಆಗಮಿಸಿದ್ದು ಪರಿಶೀಲನೆ ನಡೆಸಿದೆ.
ಬೆಳಿಗ್ಗೆ 10 ಗಂಟೆಗೆ ಈ ಬಾಕ್ಸ್ ನಗರದ ರೈಲ್ವೆ ನಿಲ್ದಾಣದ ಆಸ್ಪತ್ರೆಯ ಕಾಂಪೌಂಡ್ ನಳಿ ಪತ್ತೆಯಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ರಕ್ಷಣ ದಳ ಮತ್ತು ಜಯನಗರ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದರು.


ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸಹ ಭೇಟಿ ನೀಡಿದ್ದು ಪರಿಶೀಲನೆ ನಡೆಸುದ್ದರು. ಪೆಟ್ಟಿಗೆ ಸುತ್ತಮುತ್ತ ಸ್ಯಾಂಡ್ ಬ್ಯಾಗ್ ನಿರ್ಮಿಸಿ, ಭದ್ರತೆ ಕೂಡ ಮಾಡಲಾಗಿತ್ತು.. ರೈಲ್ವೆ ನಿಲ್ದಾಣದ ಬಳಿ ಈ ಎರಡೂ ಪೆಟ್ಟಿಗೆಯನ್ನ ಗೋಣಿ ಚೀಲದಿಂದ ಹೊಲಿದು ಬಿಟ್ಟು ಹೋಗಿರುವುದು ಆತಂಕ ಮೂಡಿಸಿತ್ತು.
ಆತಂಕ ಹುಟ್ಟಿಸಿದ್ದ ಪೆಟ್ಟಿಗೆ ಪರಿಶೀಲನೆಗೆ ಬೆಂಗಳೂರಿನಿಂದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ಮಿನಿ ಬಸ್ ನಲ್ಲಿ ಬಂದ ಬಾಂಬ್ ಸ್ಕ್ವಾಡ್ ನ 6 ಜನ ತಂಡ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ರೈಲ್ವೆ ಆರೋಗ್ಯ ಕೇಂದ್ರದ ಕಾಂಪೌಂಡ್ ಬಳಿ ಪೆಟ್ಟಿಗೆಗೆ ಮರಳಿನ ಚೀಲ ತುಂಬಲಾಗಿತ್ತು. ಒಂದು ಪೆಟ್ಟಿಗೆಗೆ ಮೂರು ಬೀಗ ಹಾಕಲಾಗಿದೆ ಒಟ್ಟು ಆರು ಬೀಗಳನ್ನ ತೆಗೆಯಲು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಮುಂದಾಗಿದೆ.
