
-
HOSANAGARA |ಸಾದಗಲ್ ವೃದ್ಧೆ ನಾಪತ್ತೆ ಪ್ರಕರಣ | ನಾಳೆ ಮುಂಜಾನೆಯಿಂದ ಶ್ವಾನದಳದಿಂದ ಶೋಧ ಕಾರ್ಯ | ಗ್ರಾಮಸ್ಥರ ನೋವಿಗೆ ಶಿವಮೊಗ್ಗ SP ಮಿಥುನ್ ಕುಮಾರ್ ಸ್ಪಂದನೆ| ಕಾರ್ಯಾಚರಣೆಗೆ PSI ರಮೇಶ್, RFO ಸಂಜಯ್ ನೇತೃತ್ವದ ತಂಡ ಸಾಥ್
ಹೊಸನಗರ: ಕರಿಮನೆ ಗ್ರಾಪಂ ವ್ಯಾಪ್ತಿಯ ಸಾದಗಲ್ ವೃದ್ಧೆ ಶಾರದಮ್ಮ ನಾಪತ್ತೆ ಪ್ರಕರಣ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸ್ಪಂದಿಸಿದ್ದಾರೆ
ಅವರ ಸೂಚನೆಯಂತೆ ಮಂಗಳವಾರ ಬೆಳಿಗ್ಗೆ 8 ರಿಂದ ಶ್ವಾನದಳದಿಂದ ವೃದ್ಧೆ ಶಾರದಮ್ಮರ ಶೋಧ ಕಾರ್ಯ ನಡೆಯಲಿದೆ. ಇದಕ್ಕೆ ನಗರ ಠಾಣೆ PSI ರಮೇಶ್ ನೇತೃತ್ವದ ಪೊಲೀಸರ ತಂಡ, ನಗರ ವಲಯ ಅರಣ್ಯ ಇಲಾಖೆಯ RFO ಸಂಜಯ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳ ತಂಡ, ಮತ್ತು ಸ್ಥಳೀಯರು ಕಾರ್ಯಾಚರಣೆಗೆ ಸಾಥ್ ನೀಡಲಿದ್ದಾರೆ.


ವೃದ್ಧೆ ಶಾರದಮ್ಮ ನಾಪತ್ತೆಯಾಗಿ 30 ಗಂಟೆ ಕಳೆದಿದೆ. ನಿರಂತರವಾಗಿ ಗ್ರಾಮಸ್ಥರಿಂದ ಶೋಧ ಕಾರ್ಯ ನಡೆಯುತ್ತಿದೆ ಆದರೂ ಶಾರದಮ್ಮರ ಸುಳಿವು ಸಿಕ್ಕಿಲ್ಲ. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಬೆಳಿಗ್ಗೆ 8 ರಿಂದ ವಿವಿಧ ತಂಡಗಳಿಂದ ಶೋಧ ಕಾರ್ಯ ನಡೆಯಲಿದ್ದು ನೂರಾರು ಸಂಖ್ಯೆಯಲ್ಲಿ ಕರಿಮನೆ, ಸಾದಗಲ್, ಹಲಸಿನಹಳ್ಳಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
