ಪ್ರಮುಖ ಸುದ್ದಿತಾಲ್ಲೂಕುಶಿವಮೊಗ್ಗಶಿವಮೊಗ್ಗ ಜಿಲ್ಲೆಸಾಗರಹೊಸನಗರ

ಹೀಗೊಂದು ಪ್ರಾಮಾಣಿಕತೆಗೆ ಪ್ರಶಸ್ತಿ ಪ್ರಧಾನ | ಇವರು ಶಿಕ್ಷಕರಿಗೆ ಮಾತ್ರವಲ್ಲ ಎಲ್ಲಾ ಸರ್ಕಾರಿ ನೌಕರರಿಗೂ ಮಾದರಿ

ಹೀಗೊಂದು ಪ್ರಾಮಾಣಿಕತೆಗೆ ಪ್ರಶಸ್ತಿ ಪ್ರಧಾನ | ಇವರು ಶಿಕ್ಷಕರಿಗೆ ಮಾತ್ರವಲ್ಲ ಎಲ್ಲಾ ಸರ್ಕಾರಿ ನೌಕರರಿಗೂ ಮಾದರಿ

ಸಾಗರ: ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಪ್ರಶಸ್ತಿ ಸನ್ಮಾನಗಳು ದೊರಕುವುದು ಸಾಮಾನ್ಯ. ಆದರೆ ಈ ತಾಲೂಕಿನಲ್ಲಿ ಸರ್ಕಾರಿ ನೌಕರರೊಬ್ಬರ ಪ್ರಾಮಾಣಿಕತೆಗೆ ‘ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ. ಅದು ಅಪ್ರಾಮಾಣಿಕತೆ ವಿರುದ್ಧ ಜೀವನದುದ್ದಕ್ಕೂ ಹೋರಾಡಿದ ಮಹನೀಯರರೊಬ್ಬರ ಹೆಸರಿನ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ.

ಈ ಪ್ರಾಮಾಣಿಕತೆ ಪ್ರಶಸ್ತಿಗೆ ಭಾಜನರಾದವರು ಬೇರಾರು ಅಲ್ಲ. ಸಾಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ.ಇ. ಸಾಗರದ ವೆಂಕಟರಮಣ ಆಚಾರ್ ಶಿಷ್ಯ ಬಳಗ ಕೊಡಮಾಡುವ ‘ ಲೋಕ ಹಿತಕರ ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ ಇದಾಗಿದೆ. ಹೊಸ , ವಿನೂತನ ಮತ್ತು ಪ್ರಾಮಾಣಿಕ ಆಶಯದೊಂದಿಗೆ 2024-25 ಸಾಲಿನಿಂದ ಪ್ರಶಸ್ತಿ ಪ್ರಧಾನ ಮಾಡಲು ನಿರ್ಧರಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ.ಇ ಪ್ರಥಮ ವರ್ಷದ ಪ್ರಶಸ್ತಿ ಭಾಜನರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಬಗ್ಗೆ..
ಸಾಗರದ ಮಂಡಗಳಲೆ ಗ್ರಾಮದಲ್ಲಿ ಜನಿಸಿ, ಹುಟ್ಟೂರಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಉನ್ನತ ಶಿಕ್ಷಣ ನಂತರ ಸರ್ಕಾರಿ ನೌಕರಿಗೆ ಸೇರಿದ ಪರಶುರಾಮಪ್ಪ.ಇ ಶಿಕ್ಷಣ ಇಲಾಖೆಯ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯನಿರ್ವಹಿಸುತ್ತಿರುವ ಇವರು ಜನಸಾಮಾನ್ಯರಿಂದ ಹಿಡಿದು ಎಲ್ಲ ಜನರಿಂದ ಪ್ರಾಮಾಣಿಕ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರನ್ನು ದಿ.ವೆಂಕಟರಮಣ ಆಚಾರ್ ಹೆಸರಿನಲ್ಲಿ ನೀಡಲಾಗುವ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರ ಆಯ್ಕೆಯನ್ನು ಸಾಗರದ ಸಾರ್ವಜನಿಕರು ಇಲಾಖೆ ಸಹೋದ್ಯೋಗಿಗಳು ಅನುಮೋದಿಸಿದ್ದು ಇವರ ಪ್ರಾಮಾಣಿಕ ಸೇವೆಯನ್ನು ಸಾಕ್ಷೀಕರಿಸಿದೆ.
ವೃತ್ತಿನಿಷ್ಠೆ, ಪ್ರಾಮಾಣಿಕತೆ, ಮಕ್ಕಳ ಶಿಕ್ಷಣದ ಕುರಿತಾದ ಅನನ್ಯ ಕಾಳಜಿ, ಕಳಂಕರಹಿತ ಚಾರಿತ್ರ್ಯದಿಂದ ಇವರು ಸರ್ಕಾರಿ ನೌಕರರ ವರ್ಗಕ್ಕೆ ಮಾದರಿಯಾಗಿದ್ದಾರೆ.

ದಿ.ಎಸ್.ವೆಂಕಟರಮಣ ಆಚಾರ್:


ಸಾಗರದಲ್ಲಿ ನಡೆದಾಡುವ ಕೆಸಿಎಸ್ಆರ್ ಎಂದೇ ಪ್ರಸಿದ್ಧಿ ಪಡೆದಿದ್ದ ಇವರು ಸರ್ಕಾರಿ ನೌಕರರಿಗೆ ಪ್ರಾತಃಸ್ಮರಣೀಯರಾಗಿದ್ದಾರೆ. ಸರ್ಕಾರಿ ನೌಕರರ ಸಮಸ್ಯೆಗಳ ಧ್ವನಿಯಾಗಿದ್ದ ಇವರು ಅನ್ಯಾಯ ಅಪ್ರಾಮಾಣಿಕತೆ ವಿರುದ್ಧ ತಮ್ಮ ಲೇಖನಿ ಝಳಪಿಸಿದವರು. ನೌಕರಿಗೆ ಸೇರಿದ ದಿನದಿಂದ ಪ್ರಾಮಾಣಿಕತೆಯಿಂದ ವೃತ್ತಿ ನಿಷ್ಠೆ ಮೆರೆದವರು. ನಿವೃತ್ತಿಯ ನಂತರವೂ ಸರ್ಕಾರಿ ನೌಕರರಿಗೆ‌ ನ್ಯಾಯ ಕೊಡಿಸುವಲ್ಲಿ, ಸಮಸ್ಯೆ ನೀಗಿಸುವಲ್ಲಿ ಹೋರಾಡಿದವರು. ಪ್ರಾಮಾಣಿಕ ಸೇವೆಯೇ ದೇವರ ಸೇವೆ ಎನ್ನುವುದು ಇವರ ಜೀವನ ಸಂದೇಶವಾಗಿದೆ. ಅವರ ನೆನಪಿನಲ್ಲಿ ಪ್ರತಿವರ್ಷ ನೀಡಲು ಉದ್ದೇಶಿಸಿರುವ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ ಪುರಸ್ಕಾರ ಸಮಕಾಲೀನ ಸಮಾಜಕ್ಕೆ ಹೊಸ ಸಂದೇಶ ಸಾರಲಿದೆ ಎನ್ನುವುದು ದಿ.ವೆಂಕರಮಣ ಆಚಾರ್ ಶಿಷ್ಯ ಬಳಗದ ಆಶಯವಾಗಿದೆ. ಇಂತಹ ಮೌಲ್ಯಯುತ ಪ್ರಶಸ್ತಿಗೆ ಪ್ರಥಮರಾಗಿ ಸಾಗರದ ಶಿಕ್ಷಣಾಧಿಕಾರಿ ಪರಶುರಾಮಪ್ಪ.ಇ ಭಾಜನರಾಗುತ್ತಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭ:
04-08-2024 ರ ಭಾನುವಾರ ಬೆಳಿಗ್ಗೆ ಸಾಗರದ ರೈಲ್ವೇಸ್ಟೇಷನ್ ಹತ್ತಿರದ ಶ್ರೀ ಶಾರದಾಂಬ ಸಭಾಭವನದಲ್ಲಿ ಬೆಳಿಗ್ಗೆ 10-30ಕ್ಕೆ ನಡೆಯಲಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *