
ಮಳೆ ಪ್ರಮಾಣ| ಟಾಪ್ 20 ರಲ್ಲಿ ಪ್ರಥಮ 7 ಸ್ಥಾನಗಳು ಶಿವಮೊಗ್ಗ ಜಿಲ್ಲೆಯಲ್ಲಿ | ಒಟ್ಟಾರೆ ಶಿವಮೊಗ್ಗ ಜಿಲ್ಲೆಯ 9 ಪ್ರದೇಶಗಳು | ಹುಲಿಕಲ್ ಆಗುಂಬೆಯನ್ನು ಹಿಂದಿಕ್ಕಿರುವುದು ಹಿಂದೆಯೇ ಸಾಬೀತಾಗಿದೆ | ಆದರೆ ಈ ವರ್ಷ ಅಚ್ಚರಿ ಹುಟ್ಟಿಸಿದ್ದು ಮಾತ್ರ.. ಮಾಸ್ತಿಕಟ್ಟೆ
ಶಿವಮೊಗ್ಗ: ಈಬಾರಿ ರಾಜ್ಯಾಧ್ಯಂತ ಬಾರೀ ಮಳೆಯಾಗಿದೆ. ಅದರಲ್ಲು ಕರಾವಳಿ, ಮಲೆನಾಡಲ್ಲಿ ರಣ ಭೀಕರ ಮಳೆಯಾಗಿದೆ. ಈ ಬಾರಿ ಮಳೆ ಪ್ರಮಾಣ ಸರಾಸರಿ ಟಾಪ್ 20 ರಲ್ಲಿ ಶಿವಮೊಗ್ಗ ಜಿಲ್ಲೆಯ 9 ಪ್ರದೇಶಗಳು ಸೇರಿವೆ. ಮೊದಲಿನ 7 ಸ್ಥಾನಗಳು ಕೂಡ ಶಿವಮೊಗ್ಗ ಜಿಲ್ಲೆ ಸೇರಿರುವುದು ವಿಶೇಷ.
ಕರ್ನಾಟಕದ ಚಿರಾಪುಂಜಿ ಎಂದೇ ಬಿಂಬಿತವಾದ ಆಗುಂಬೆ ಮಳೆಕಾಡು ಅಂತಲೇ ಪ್ರಸಿದ್ಧಿ. ಆದರೆ ಆಗುಂಬೆಗಿಂತಲೂ ಹುಲಿಕಲ್ ನಲ್ಲಿ ಅಧಿಕ ಮಳೆಯಾಗುತ್ತಿದೆ ಅನ್ನೋದು ಹಿಂದೆಯೇ ಸಾಬೀತಾಗಿದೆ. ಆದರೆ ಈ ವರ್ಷದ ಮಳೆ ಪ್ರಮಾಣದಲ್ಲಿ ಅಚ್ಚರಿ ಹುಟ್ಟಿಸಿದ್ದು ಮಾತ್ರ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ.. ಹೌದು ಆಗುಂಬೆ ಮತ್ತು ಹುಲಿಕಲ್ ಮಳೆಯನ್ನು ಮೀರಿಸಿರುವ ಮಾಸ್ತಿಕಟ್ಟೆ, ಆಗಸ್ಟ್ 2ರವರೆಗಿನ ಮಳೆ ಪ್ರಮಾಣದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಚಕ್ರಾ ಜಲಾಶಯ ಪ್ರದೇಶ ಪಡೆದುಕೊಂಡಿದೆ.


ಇನ್ನು ಹುಲಿಕಲ್ ಮತ್ತು ಆಗುಂಬೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.
ಮಾಸ್ತಿಕಟ್ಟೆ, ಚಕ್ರಾ ಜಲಾಶಯ, ಹುಲಿಕಲ್, ಆಗುಂಬೆ, ಸಾವೇಹಕ್ಲು, ಮಾಣಿ ಜಲಾಶಯ, ಯಡೂರು ಕ್ರಮವಾಗಿ ಮೊದಲ ಏಳು ಸ್ಥಾನ ಪಡಿದಿದೆ. ನೊಣಬೂರು ಮತ್ತು ಮೇಗರವಳ್ಳಿ ಸೇರಿ ಒಟ್ಟು ಒಂಭತ್ತು ಪ್ರದೇಶಗಳು ಟಾಪ್ 20ರಲ್ಲಿ ಸ್ಥಾನ ಪಡೆದಿದೆ. ಹಾಗಂತ ಮಾಸ್ತಿಕಟ್ಟೆ, ಚಕ್ರಾ, ಹುಲಿಕಲ್, ಆಗುಂಬೆ ನಡುವೆ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದಿಲ್ಲ. ಮಳೆ ಪ್ರಮಾಣದ ಸರಾಸರಿ ಸನಿಹದಲ್ಲೇ ಇದೆ.
