ಶಿವಮೊಗ್ಗ ಜಿಲ್ಲೆತಾಲ್ಲೂಕುಶಿವಮೊಗ್ಗಸಾಗರಹೊಸನಗರ

ಬೆಂಕಿಯಾಟಕ್ಕೆ ಮನಸೋತ ಸಾಗರದ ಜನತೆ

ಬೆಂಕಿಯಾಟಕ್ಕೆ ಮನಸೋತ ಸಾಗರದ ಜನತೆ: ಅದ್ದೂರಿಯಾಗಿ ಸಂಪನ್ನಗೊಂಡ ಶ್ರೀನಗರದ ಯುವಜನ ಸಂಘದ ಗಣೇಶೋತ್ಸವ. ಸಾಗರ ನಗರದ 8ನೇ ವಾರ್ಡ್ ಶ್ರೀನಗರದಲ್ಲಿ 48ನೇ ವರ್ಷದ ಗಣೇಶ ವಿಸರ್ಜನೆ ಭಾನುವಾರ ಅದ್ದೂರಿಯಾಗಿ ನಡೆಯಿತು …

ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ
ಹಲವು ವರ್ಷಗಳಿಂದ ಸಾಗರದ ಶ್ರೀನಗರ ಯುವಜನ ಸಂಘ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ
ಪ್ರದರ್ಶನವನ್ನು ಶ್ರೀನಗರದಲ್ಲಿ, ಸಾಗರ ನಗರ ಪೊಲೀಸ್ ಸ್ಟೇಷನ್ ವೃತ್ತ, ನಗರದ ಹೃದಯ ಭಾಗ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ಸಾರ್ವಜನಿಕರು ಕಣ್ತುಂಬಿ ಕೊಂಡರು ಸಾಗರದ ಇತಿಹಾಸದಲ್ಲಿ ಬೆಂಕಿಯಟ್ಟ ಪ್ರಾರಂಭವಾಗಿದ್ದು ಹೂವಿನ ಗೋಪಾಲಣ್ಣ ಅವರ ಕಾಲದಲ್ಲಿ ಇದು ಮೂಲತಃ ಮಂಗಳೂರಿನಲ್ಲಿ ಪ್ರಾರಂಭವಾಗಿರುವಂತದ್ದು ಪ್ರಥಮವಾಗಿ ಸಾಗರದ ಹಿಂದೂ ಮಹಾಸಭಾ ಗಣಪತಿಯಲ್ಲಿ ಪ್ರದರ್ಶನಗೊಂಡಿತು ನಂತರ ಶ್ರೀನಗರ ಯುವಜನ ಸಂಘಕ್ಕೆ ಹಸ್ತಾಂತರವಾಯಿತು
ಆಧುನಿಕ ಫಿಟ್ನೆಸ್ ಸೆಂಟರ್‍ಗಳ ಭರಾಟೆಯ ನಡುವೆಯೂ, ಪ್ರಾಚೀನ, ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವ್ಯಾಯಾಮಗಳಿಗೆ, ದೇಹದಾಢ್ರ್ಯ ಪ್ರದರ್ಶನದ ಜೊತೆಗೆ ವ್ಯಾಯಾಮ ಶಾಲೆಗಳು ಆಕರ್ಷಕ ಹಾಗು ಸಾಹಸಮಯ ಪ್ರದರ್ಶನಕ್ಕೂ ಹೆಸರುವಾಸಿಯಾಗಿವೆ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಸಾಹಸಮಯ ಪ್ರದರ್ಶನಗಳನ್ನು ತಾಲೀಮು ಪ್ರದರ್ಶನಕಾರರು ನೀಡುತ್ತಾರೆ. ಆದರೂ ತಾಲೀಮು ಪ್ರದರ್ಶನವನ್ನು ದೇಹದಲ್ಲಿ ಶಕ್ತಿ ಇರುವ ತನಕ ಮುಂದುವರಿಸಿಕೊಂಡು ಹೋಗಬೇಕೆಂಬ ಇಚ್ಛೆ ಇದೆ ಎನ್ನುತ್ತಾರೆ ಸಾಗರದ ಎಂ ಜಿ ಚಂದ್ರಕಾಂತ್ ಈಗಲೂ ತರಬೇತಿಯನ್ನು ನೀಡುತ್ತಿದ್ದಾರೆ

ತಾಲೀಮಿನಲ್ಲಿ ಸುಮಾರು 42 ಪ್ರಕಾರದ ತಾಲೀಮು ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್ ಬಾಣ, ಬಣ್ಣೋಟ್ಟಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸೋದು. ಈ ಬಣ್ಣೋಟ್ಟಿಗಳ ತುದಿಗೆ ಸೀಮೆ ಎಣ್ಣೆಯಿಂದ ಅದ್ದಿದ ಬಟ್ಟೆಯನ್ನು ಕಟ್ಟಿ ಅದಕ್ಕೆ ಬೆಂಕಿ ಹಚ್ಚಿ ಎಲ್ಲಾ ದಿಕ್ಕುಗಳಿಗೆ ಎಂಟು ಬಾರಿ ತಿರುಗಿ, ಮೈ ಕೈಗಳಿಗೆ ಕೊಂಚವೂ ಕೂಡಾ ಬೆಂಕಿಯ ಕೆನ್ನಾಲಿಗೆ ತಾಕದಂತೆ ಬೀಸುವ ಸಾಹಸ ತಾಲೀಮಿನಲ್ಲಿ ಎಲ್ಲರ ಮನಸೆಳೆಯುವ ಒಂದು ಪ್ರಕಾರದ ಪ್ರದರ್ಶನವಾಗಿದೆ.

ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವ ನಡುವೆ ತಾಲೀಮು ತಂಡಗಳೂ ಇಂದು ಬೆರಳೆಣಿಕೆಯ ಸಂಖ್ಯೆಗೆ ಬಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯತೆ ಇಂದಿನ ಯುವ ಜನಾಂಗ ಮಾಡಬೇಕಿದೆ ಎಂದು ಶ್ರೀನಗರ ಯುವಜನ ಸಂಘದ ಉಪಾಧ್ಯಕ್ಷರಾದ ದಯಾನಂದ್ ನಾಯಕ್ ಹೇಳುತ್ತಾರೆ….

ವರದಿ: ಸೂರಜ್ ನಾಯರ್

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *