ತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಶಿವಮೊಗ್ಗ ಜಿಲ್ಲೆಸಾಗರಹೊಸನಗರ

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ!.. ಬಿಇಒಗೆ ಧಿಕ್ಕಾರ.. ಅಧಿಕಾರಿಗಳಿರುವಂತೆಯೇ..ಶಾಲಾ ಗೇಟಿಗೆ ಬೀಗ ಜಡಿದ ಗ್ರಾಮಸ್ಥರು..: ಬಿಇಒ ಬಂದರೆ ಮಾತ್ರ ಗೇಟ್ ಒಪನ್.. ಗ್ರಾಮಸ್ಥರ ಪಟ್ಟು..

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ!.. ಬಿಇಒಗೆ ಧಿಕ್ಕಾರ.. ಅಧಿಕಾರಿಗಳಿರುವಂತೆಯೇ..ಶಾಲಾ ಗೇಟಿಗೆ ಬೀಗ ಜಡಿದ ಗ್ರಾಮಸ್ಥರು..: ಬಿಇಒ ಬಂದರೆ ಮಾತ್ರ ಗೇಟ್ ಒಪನ್.. ಗ್ರಾಮಸ್ಥರ ಪಟ್ಟು..

ಹೊಸನಗರ: ಏನ್ರಿ ಇದು ಸರ್ಕಾರಿ ಶಾಲೆ ಅಲ್ವೇನ್ರಿ..? 33 ಮಕ್ಕಳು ಇಲ್ವೇನ್ರಿ.. ಒಬ್ಬರು ಶಿಕ್ಷಕರು ಇಲ್ಲಾ ಅಂದ್ರೆ ಹೇಗೆ.. ಇಲ್ಲಿ ಬಸ್ಸಿಲ್ಲ.. ಸಂಪರ್ಕ ಕಷ್ಟ.. ಒಬ್ಬ ಅನಾರೋಗ್ಯ ಶಿಕ್ಷಕರನ್ನು ನೇಮಿಸಲು ಹೊರಟರೇ ಹೇಗೆ.. ಸರ್ಕಾರಿ ಶಾಲೆ ಮುಚ್ಚುವ ಹುನ್ನಾರವೇ.. ಬಿಇಒ ಪಾತ್ರ ಏನು.. ಅವರು ಬರಬೇಕು ಗೇಟ್ ಒಪನ್ ಮಾಡಬೇಕು ಅಷ್ಟೆ..!

ಹೌದು ಹೀಗಂತ ಗ್ರಾಮಸ್ಥರು ನೇರವಾಗಿ ಬಿಇಒ ಮೇಲೆ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಇರುವಂತೆಯೇ ಶಾಲಾ ಗೇಟಿಗೆ ಬೀಗ ಜಡಿದ ಘಟನೆ ಹೊಸನಗರ ತಾಲೂಕಿನ ಹಿಲ್ಕುಂಜಿ ಬೇಳೂರು ಶಾಲೆಯಲ್ಲಿ ಸೋಮವಾರ ನಡೆದಿದೆ.

ನಾಲ್ಕು ಖಾಯಂ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಾಗಿದ್ದು ಈಗ ಒಬ್ಬರು ಶಿಕ್ಷಕರು ಇಲ್ಲ.. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ನೆಪಮಾತ್ರಕ್ಕೆ ಅನಾರೋಗ್ಯದಲ್ಲಿರುವ ಶಿಕ್ಷಕರನ್ನು ನೇಮಕ ಮಾಡಲು ಬಿಇಒ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಬೇಳೂರು ಸರ್ಕಾರಿ ಶಾಲೆ ಹಿಲ್ಕುಂಜಿ ಮುಖ್ಯರಸ್ತೆಯಿಂದ 6 ಕಿಮೀ ದೂರವಿದೆ. ಬಸ್ಸಿನ ಸಂಪರ್ಕವಿಲ್ಲ. ಅನಾರೋಗ್ಯ ಪೀಡಿತ ಶಿಕ್ಷಕರು ಸಂಪರ್ಕ ಸಾಧಿಸಲು ಹೇಗೆ ಸಾಧ್ಯ. ನಮಗೆ ಈ ಹಿಂದೆ ಇದ್ದ ಶಿಕ್ಷಕರನ್ನು ಮುಂದುವರೆಸಿ ಇಲ್ಲವೇ ಕ್ರಿಯಾಶೀಲ ಶಿಕ್ಷಕರನ್ನು ಕೊಡಿ ಎಂದು ಆಗ್ರಹಿಸಿದರು.

ಗೇಟ್ ಬಂದ್..!
ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದಂತೆ ಶಿಕ್ಷಣ ಸಂಯೋಜಕ‌ ಪರಮೇಶ್ವರ್, ಸಿಆರ್ಪಿ ನಾಗರಾಜ ಭೇಟಿ ನೀಡಿ ಪೋಷಕರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು. ಇಲ್ಲಾ ಸರ್.. ನಮಗೆ ಖುದ್ದು ಬಿಇಒ ಕೃಷ್ಣಮೂರ್ತಿಯವರೇ ಬರಬೇಕು. ಅಲ್ಲಿಯವರಗೆ ನಾವು ನೀವೂ ಒಳಗೆ ಇರೋಣ ಎಂದು ಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕು ಗೇಟ್ ತೆರೆಯಲ್ಲ.. ಕೇವಲ ನಗರ ಪ್ರದೇಶದ ಶಾಲೆಗಳಿಗೆ ಮಾತ್ರ ಬಿಇಒ ಬಂದು ಹೋಗುವುದಲ್ಲ. ನಮ್ಮ ಹಳ್ಳಿ ಶಾಲೆಗೂ ಬರಲಿ ಇಲ್ಲಿಯ ಮಕ್ಕಳ ಸಂಕಷ್ಟ ಅರಿಯಲಿ.. ಒಂದು ವೇಳೆ ಬಿಇಒ ಬರದೇ ನಿರ್ಲಕ್ಷ ತೋರಿದರೆ.. ಶಾಲಾ ಮಕ್ಕಳು, ಪೋಷಕರಾಧಿಯಾಗಿ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬಂದು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಿಕೊಂಡು ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ನಾಳೆಯೇ ಹಾಕಲಾಗುವುದು ಎಂದು ಎಚ್ಚರಿಸಿದರು.
ವಿವೇಕಾನಂದ ಎಂ.ಜಿ, ಉಪಾಧ್ಯಕ್ಷೆ ವೀಣಾ, ಕವಿತಾ ಪರಮೇಶ್ವರ, ನಂದಿನಿ ರಾಘವೇಂದ್ರ, ಶಿವಕುಮಾರ್, ಪಲ್ಲವಿ ರಮೇಶ್, ಭಾಸ್ಕರ್, ಜಗದೀಶ್, ಗಗನ್, ಹರೀಶ್, ಹೃತಿಕ್ ಗೌಡ, ಪ್ರಮುಖರಾದ ಉಳ್ಳಾಗದ್ದೆ ದೇವೇಂದ್ರಗೌಡ, ಕುಮಾರ ಹಿಲ್ಕುಂಜಿ ಇತರರು ಭಾಗವಹಿಸಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *