
ಜೀಪ್ ನದಿಗೆ ಬಿದ್ದು ಮಗ ಸಾ*ವು! ಮಗನ ದೇಹ ಸಿಗುವ ಮುನ್ನವೇ ತಾಯಿ ಆತ್ಮಹ*ತ್ಯೆ| ಕಳಸದಲ್ಲಿ ನಡೆಯಿತು ಹೃದಯ ಹಿಂಡುವ ಘಟನೆ
ಕಳಸ: ಮಗ ನದಿಗೆ ಬಿದ್ದು ಸಾವನ್ನಪ್ಪಿದ್ದು ಮಗನ ದೇಹ ಸಿಗುವ ಮುನ್ನವೇ.. ಮನನೊಂದು ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಕಳಸ (ಚಿಕ್ಕಮಗಳೂರು) ತಾಲೂಕಿನ ಕೊಳಮಾಗೆ ಎಂಬಲ್ಲಿ ನಡೆದಿದೆ.
ಮೃತ ತಾಯಿ ರವಿಕಲಾ (48) ಎಂದು ಗುರುತಿಸಲಾಗಿದೆ. ಮೃತ ರವಿಕಲಾ ಪುತ್ರ 23ರ ಹರೆಯದ ಶಮಂತ್ ಜು.24ರಂದು ಪಿಕಪ್ ಜೀಪಿನಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದನು.
ವ್ಯಾಪಕ ಮಳೆಯ ಕಾರಣ ಜೀಪ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಭದ್ರಾ ನದಿಗೆ ಉರುಳಿ ಬಿದ್ದು ಶಮಂತ್ ಸಾವನ್ನಪ್ಪಿದ್ದನು. ನಿರಂತರ ಮಳೆ ಸುರಿಯುತ್ತಿದ್ದು ಭದ್ರಾ ನದಿಯಿಂದ ಜೀಪ್ ಮೇಲೆತ್ತುವ ಕಾರ್ಯಾಚರಣೆಗೂ ತೊಂದರೆಯಾಗಿತ್ತು. ಶಮಂತ್ ಮೃತದೇಹವನ್ನು ಮೇಲಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಆದರೆ, ನಿನ್ನೆ ಸಂಜೆ ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಈವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಮಗನ ಮೃತದೇಹ ಸಿಗುವ ಮುನ್ನವೇ ಜು.24ರ ರಾತ್ರಿ ವೇಳೆ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
