ರಾಜ್ಯHomeಪ್ರಮುಖ ಸುದ್ದಿಶಿವಮೊಗ್ಗಶಿವಮೊಗ್ಗ ಜಿಲ್ಲೆಸಾಗರ

ಜೋಗದಲ್ಲಿ 2000ಮೆ.ವ್ಯಾ. ವಿದ್ಯುತ್ಉತ್ಪಾದನೆಗೆ ಕ್ರಮ : ಪಂಪ್ಡ್ ಸ್ಟೋರೇಜ್ ಪರಿಸರಕ್ಕೆ ಯಾವುದೇ ಹಾನಿ ಮಾಡದು: ಕೆ.ಜೆ.ಜಾರ್ಜ್

ಜೋಗದಲ್ಲಿ 2000ಮೆ.ವ್ಯಾ. ವಿದ್ಯುತ್ಉತ್ಪಾದನೆಗೆ ಕ್ರಮ : ಕೆ.ಜೆ.ಜಾರ್ಜ್
ಶಿವಮೊಗ್ಗ :  ಮುಂದಿನ ಕೆಲವು ದಶಕಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಾಜ್ಯದಲ್ಲಿ ಬರಬಹುದಾದ ವಿದ್ಯುತ್ಕೊರತೆಯನ್ನು ನೀಗಿಸಿ, ಸಮರ್ಪಕವಾಗಿ ವಿದ್ಯುತ್ನ್ನು ಸರಬರಾಜುಗೊಳಿಸಲು 2000ಕೋಟಿ ರೂ.ಗಳ ವೆಚ್ಚದಲ್ಲಿ ಪಂಪ್ಡ್ ಸ್ಟೋರೇಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ಅವರು ಹೇಳಿದರು.

ಅವರು ಇಂದು ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಹರಿಯುವ ನದಿಗೆ ಯಾವುದೇ ಅಡತಡೆ ಮಾಡದಂತೆ ಈಗಿರುವ ನೀರನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಂದಾಜು 2000ಮೆ.ವ್ಯಾ. ವಿದ್ಯುತನ್ನು ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಉದ್ದೇಶಿತ ಶರಾವತಿ ಪಂಪ್ಡ್ಸ್ಟೋರೇಜ್ನ್ನು ನಿರ್ಮಿಸುವಲ್ಲಿ ಪರಿಸರವಾದಿಗಳು ಸೇರಿದಂತೆ ಅನೇಕ ಜನರ ವಿರೋಧವಿರುವುದನ್ನು ತಿಳಿಯಲಾಗಿದೆ. ಈ ವಿಷಯದ ಕುರಿತಂತೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂತೆಯೇ ಸ್ಥಳೀಯರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರಿಗೆ ಪರಿಸರ ನಾಶವಾಗದಿರುವ ಹಾಗೂ ಯಾರಿಗೂ ತೊಂದರೆ ಆಗದಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೇ ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿರುವ 120ಎಕರೆ ಭೂಪ್ರದೇಶದಲ್ಲಿನ ಅರಣ್ಯದಲ್ಲಿ ಹಾದು ಹೋಗಲಿರುವ ಪೈಪ್ಲೈನ್ಮೇಲ್ಭಾಗದಲ್ಲಿ ನೈಸರ್ಗಿಕವಾಗಿ ಗಿಡಗಳನ್ನು ಬೆಳೆಸಲಾಗುವುದು ಎಂದರು.

ಕೇಂದ್ರ ಪರಿಸರ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ, ಯೋಜನೆಯನ್ನು ಆರಂಭಿಸಲಾಗುವುದು ಎಂದ ಅವರು, ಪ್ರಸ್ತುತ ಉತ್ಪಾದನೆಯಾಗುತ್ತಿರುವ ವಿದ್ಯುತ್1000ಮೆ.ವ್ಯಾ. ವಿದ್ಯುತ್ಉತ್ಪಾದನೆಯಾಗುತ್ತಿದೆ. ಈ ಯೋಜನೆಯ ಅನುಷ್ಠಾನದಿಂದ ಸುಮಾರು 3000ಮೆ.ವ್ಯಾ. ವಿದ್ಯುತ್ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದರು.
ಇದರೊಂದಿಗೆ ಅತ್ಯಂತ ಕಡಿಮೆ ವೆಚ್ಚದ ಸೋಲಾರ್ವಿದ್ಯುತ್ನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ಜನರಿಗೆ ಸಕಾಲದಲ್ಲಿ ವಿದ್ಯುತ್ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶ. ಈ ಸಂದರ್ಭದಲ್ಲಿ ಕಡಿತಲೆಯಾಗುವ ಮರಗಳಿಗೆ ಪರ್ಯಾಯವಾಗಿ ಮರಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ಇದರಿಂದಾಗಿ ಪರಿಸರದ ಮೇಲೆ ಯಾವುದೇ ಹಾನಿಯಾಗಲಾರದು. ಅಲ್ಲದೇ ಯಾವುದೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದಿಲ್ಲ ಎಂದವರು ತಿಳಿಸಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24 ಎಕರೆ ತೆರವು!

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24…

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *