Homeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿರಾಜ್ಯ

ಕರಾಟೆ ಮಹಿಳೆಯರ ಸಂರಕ್ಷಣಾ ಕವಚ ಇದ್ದಂತೆ : ಪತ್ರಕರ್ತ ರವಿ ಬಿದನೂರು | ಕರಾಟೆ ಶಿಕ್ಷಕ ಎನ್.ಎಸ್.ಹರೀಶ ಕುಮಾರ್ ದಂಪತಿಗಳಿಗೆ ಸಾರ್ಥಕ ಸೇವಾ ಗೌರವ

ಕರಾಟೆ ಮಹಿಳೆಯರ ಸಂರಕ್ಷಣಾ ಕವಚ ಇದ್ದಂತೆ : ಪತ್ರಕರ್ತ ರವಿ ಬಿದನೂರು | ಕರಾಟೆ ಶಿಕ್ಷಕ ಎನ್.ಎಸ್.ಹರೀಶ ಕುಮಾರ್ ದಂಪತಿಗಳಿಗೆ ಸಾರ್ಥಕ ಸೇವಾ ಗೌರವ

ಹೊಸನಗರ: ಕರಾಟೆ ಕೇವಲ‌ ಶಿಕ್ಷಣ ಮತ್ತು ಕ್ರೀಡೆಗೆ ಸೀಮಿತವಾಗಿಲ್ಲ. ಅದು ಆತ್ಮರಕ್ಷಣೆಯ ಗುರಾಣಿ.‌ ಹೆಣ್ಣು ಮಕ್ಕಳಿಗೆ ಸಂರಕ್ಷಣೆಯ ಕವಚ ಇದ್ದಂತೆ ಎಂದು ಪತ್ರಕರ್ತ ರವಿ ಬಿದನೂರು ಹೇಳಿದರು.

ತಾಲೂಕಿನ ಮಾಸ್ತಿಕಟ್ಟೆ ರಿಕ್ರಿಯೇಶನ್ ಕ್ಲಬ್‌ನಲ್ಲಿ AIKI ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ದಿ.ಲಕ್ಷ್ಮಣ ಶೆಟ್ಟಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎಎಸ್ಎಮ್ಎ ಕರಾಟೆ ಸ್ಪರ್ಧೆ -2026 ಕತ್ತು 13 ನೇ ವರ್ಷದ ಕರಾಟೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಕರಾಟೆಗಿದ್ದ ಕೀಳರಿಮೆ ಇಂದು ದೂರವಾಗಿದೆ. ಶಿಕ್ಷಣ, ಬದುಕು, ಭದ್ರತೆ, ಸದೃಢತೆ ಮತ್ತು ಕ್ರಿಯಾಶೀಲತೆಗೆ ಕರಾಟೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಕರಾಟೆ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳು‌ ಹೆಚ್ಚು ಶಿಕ್ಷಣ ಪಡೆದು ಕರಾಟೆ ಶಿಕ್ಷಕರಾಗಿ ಹೊರಹೊಮ್ಮುತ್ತಿದ್ದಾರೆ ಎಂದರು.
ಕರಾಟೆ ಶಿಕ್ಷಕರು ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದು, ಕಷ್ಟದಲ್ಲೂ ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಈ‌ ನಿಟ್ಟಿನಲ್ಲಿ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.
ಅಧ್ಯಕ್ಷತೆಯ‌ ಮಾತನಾಡಿದ ಸಂಘದ ಗೌರವಾಧ್ಯಕ್ಷ ವಕೀಲ ಮೋಹನ‌ಶೆಟ್ಟಿ ಸಂಪೇಕಟ್ಟೆ, ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಮತ್ತು ವಾರ್ಚಿಕೋತ್ಸವ ನಡೆಸಲು ಸಹಕರಿಸಿದ ಕೆಪಿಸಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ 13 ವರ್ಷದಿಂದ ಕರಾಟೆ ಶಿಕ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಎನ್.ಎಸ್.ಹರೀಶ್ ಮತ್ತು ಭಾಗ್ಯಶ್ರೀ ದಂಪತಿಗಳಿಗೆ ಅಭಿನಂದಿಸಿ ಗೌರವ ನೀಡಲಾಯಿತು.
ಹಿರಿಯ ಕರಾಟೆ ಶಿಕ್ಷಕ ಚಂದ್ರಪ್ಪ ಬಿ.ಇ, ಶಶಾಂಕ್ ಪ್ರಕಾಶ್, ಪ್ರತೀಕ್ ದೇವೇಂದ್ರ, ಆರ್ಯ ಎಂ.ಮಂಜಪ್ಪ, ಸುಭೀಕ್ಷಾ ಎಸ್.ಕುಮಾರ್, ಅಧ್ವೈತಾ ಸದಾನಂದ, ಅಭಿನವ್ ಬಾಲಕೃಷ್ಣ, ಶ್ರೇಯಾ ಉದಯ್ ಸೇರಿದಂತೆ ಕರಾಟೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ವಿನಾಯಕ ಕುಮಾರ್, ಶಿಕ್ಷಣ ಸಮನ್ವಯಾಧಿಕಾರಿ ಕರಿಬಸಪ್ಪ, ಡಾ.ಸುದೀಪ್ ಡಿಮೆಲ್ಲೋ, ರಾಯಪ್ಪನ್ ಹೆಚ್.ಡಿ.ಕೋಟೆ, ಕರಾಟೆ ಶಿಕ್ಚಕ ಜೆ.ಕೆ.ರಾಘವೇಂದ್ರ, ಲಕ್ಷ್ಮಣ ಆಚಾರ್ಯ, ಪ್ರಕಾಶ ಗೌಡ, ವೆಂಕಟೇಶ್, ಸುರೇಶ ಹೆಚ್.ಎಂ, ಶ್ರೀಧರಶೆಟ್ಟಿ, ಪೃಥ್ವಿ ಶೆಟ್ಟಿ, ನಿಖಿಲ್ ಶೆಟ್ಟಿ, ಹಳೇ ಕರಾಟೆ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *