Homeಕ್ರೈಂತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿ

ಯಡೂರು‌ ಗ್ರಾಮದಲ್ಲಿ ಚಿರತೆ ಮೃತ ದೇಹ ಪತ್ತೆ | ನಗರ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲು

ಯಡೂರು‌ ಗ್ರಾಮದಲ್ಲಿ ಚಿರತೆ ಮೃತ ದೇಹ ಪತ್ತೆ

ಹೊಸನಗರ: ತಾಲೂಕಿನ ಯಡೂರು ಗ್ರಾಮದಲ್ಲಿ ಶನಿವಾರ ಚಿರತೆಯ ಮೃತ ದೇಹ ಪತ್ತೆಯಾಗಿದೆ.

ಬೆಳಿಗ್ಗೆ ಅರಣ್ಯ ಸಿಬ್ಬಂದಿಗಳು‌ ಗಸ್ತಿನಲ್ಲಿದ್ದಾಗ ಯಡೂರು ಗ್ರಾಮದ ಸನಂ 20 ರಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಚಿರತೆ 5 ವರ್ಷದ ಪ್ರಾಯದ್ದು ಎಂದು ಗೊತ್ತಾಗಿದೆ. ಅಲ್ಲದೇ ಮೇಲ್ನೋಟಕ್ಕೆ ಸ್ವಾಭಾವಿಕ ಸಾವು ಎಂದು ತಿಳಿದುಬಂದಿದೆ.

ನಗರ ವಲಯ ಇಲಾಖೆಯಲ್ಲಿ ಆರ್‌ಎಫ್ಒ ಸಂತೋಷ ಮಲ್ಲನಗೌಡ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆದು ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬಳಿಕ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ದೇಹ ಪತ್ತೆಯಾದ ಜಾಗದಲ್ಲೇ ನಿಯಮಾನುಸಾರ ಸುಡಲಾಗಿದೆ.

ತಹಶೀಲ್ದಾರ್ ಭರತ್ ರಾಜ್, ಎಸಿಎಫ್ ಮೋಹನ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *