Homeಭದ್ರಾವತಿಶಿಕಾರಿಪುರಶಿವಮೊಗ್ಗಸಾಗರಹೊಸನಗರ

ಐತಿಹಾಸಿಕ ಬಿದನೂರು ಕೋಟೆ ಅಭಿವೃದ್ಧಿಗೆ ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಮನವಿ

ಶಿವಮೊಗ್ಗ ಜು.25: ಜಿಲ್ಲೆಯ ದೇವಾಲಯಗಳ ಅಭಿವೃದ್ಧಿಯನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಹಾಗೂ ಇಲಾಖೆಯಿಂದ ಅಭಿವೃದ್ಧಿಪಡಿಸುವಂತೆ ಕೋರಿ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಕೇಂದ್ರ ಸಚಿವರು ಕಿಶನ್ ರೆಡ್ಡಿ ಇವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದ ಸಂಸದ ಬಿ.ವೈ ರಾಘವೇಂದ್ರ ಮನವಿ ಸಲ್ಲಿಸಿದ್ದು  ಇದರಲ್ಲಿ ಐತಿಹಾಸಿಕ ಬಿದನೂರು ಕೋಟೆಯೂ ಸೇರಿದೆ.
ಹೊಸನಗರ ತಾಲೂಕಿನಲ್ಲಿರುವ ಬಿದನೂರು ಕೋಟೆಯ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುವುದು:

16ನೇ ಶತಮಾನದಲ್ಲಿ ಕೆಳದಿ ಸಂಸ್ಥಾನದ ವೀರ ಶಿವಪ್ಪ ನಾಯಕನ ಕಾಲದಲ್ಲಿ ಕೆಳದಿಯ ರಾಜಧಾನಿ ಬಿದನೂರು (ನಗರ) ನಲ್ಲಿ ಕಟ್ಟಿಸಿರುವ ಐತಿಹಾಸಿಕ ಕೋಟೆಯನ್ನು ಜೀರ್ಣೋದ್ಧಾರಗೊಳಿಸುವುದು

ಶಿಕಾರಿಪುರ ತಾಲ್ಲೂಕು ಬಳ್ಳಿಗಾವಿಯಲ್ಲಿರುವ ಭೇರುಂಡೇಶ್ವರ ದೇವಸ್ಥಾನದ (ಗರುಡಗಂಬ) ಜೀರ್ಣೋದ್ದಾರ ಕಾರ್ಯ ಕೈಗೊಳ್ಳುವುದು :

12ನೇ ಶತಮಾನದಲ್ಲಿ ಚಾಲುಕ್ಯ ಸಾಮ್ರಾಜ್ಯದ ಚಾಮುಂಡರಾಯ ಅರಸು ತಮ್ಮ ವಿಜಯದ ಸಂಕೇತವಾಗಿ ನಿರ್ಮಿಸಿರುವ 9.15 ಮೀಟರ್ ಎತ್ತರದ ಗಂಡಬೇರುಂಡ ಪಕ್ಷಿಯ ಸುಂದರವಾದ ವಿಜಯ ಸ್ತಂಭವು ವಾಲಿಕೊಂಡಿದ್ದು, ಅದನ್ನು ಪುನರ್ ನಿರ್ಮಾಣ ಮಾಡುವುದು.

ಶಿಕಾರಿಪುರ ತಾಲೂಕು ಬಳ್ಳಿಗಾವಿಯಲ್ಲಿರುವ ಸಂರಕ್ಷಿತ ಸ್ಮಾರಕ “ಕೇದಾರೇಶ್ವರ ದೇವಸ್ಥಾನ ಸಮೀಪದಲ್ಲಿರುವ ಅಲ್ಲಮಪ್ರಭುವಿನ ಜನ್ಮಸ್ಥಳದಲ್ಲಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಅನುಮತಿ ನೀಡುವುದು: ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿರುವ ಸಂರಕ್ಷಿತ ಸ್ಮಾರಕವಾದ ಶ್ರೀ ಕೇದಾರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಅಲ್ಲಮಪ್ರಭುವಿನ ಜನ್ಮಸ್ಥಳದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಅನುಮತಿ ನೀಡಲು.

ಶಿಕಾರಿಪುರ ತಾಲೂಕು ಬಳ್ಳಿಗಾವಿಯಲ್ಲಿರುವ ಸಂರಕ್ಷಿತ ಸ್ಮಾರಕ ಕೇದಾರೇಶ್ವರ ದೇವಸ್ಥಾನ ಸಮೀಪದಲ್ಲಿ ಅಂಜನೇಯ ದೇವಸ್ಥಾನದ ಜೀರ್ಣೋದ್ಧಾರ

ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯು 12ನೇ ಶತಮಾನದ ವಚನ ಕವಿ ಶ್ರೇಷ್ಠರಾದ ಶ್ರೀ ಅಲ್ಲಮಪ್ರಭುಗಳ ಜನ್ಮಸ್ಥಳವಾಗಿದ್ದು, ಇಲ್ಲಿ ಸುಮಾರು 100 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸುಂದರ ಅಂಜನೇಯ ದೇವಸ್ಥಾನ ಹಾಗೂ ಅಲ್ಲಮಪ್ರಭುಗಳ ಮತ್ತು ಅವರ ತಾಯಿ-ತಂದೆಯವರ ಸಮಾಧಿಯಿದ್ದು, ಇವುಗಳು ಸಂರಕ್ಷಿತ ಸ್ಮಾರಕವಾಗಿರುವ ಶ್ರೀ ಕೇದಾರೇಶ್ವರ ದೇವಸ್ಥಾನದ ಹತ್ತಿರವಿರುವುದರಿಂದ, ಇವುಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಅನುಮತಿ ನೀಡಲು.

ಭದ್ರಾವತಿಯ ಅಸುರಕ್ಷಿತ ಸ್ಮಾರಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಂರಕ್ಷಣಾ ಕಾರ್ಯ ಕೈಗೊಳ್ಳುವುದು:

ಭದ್ರಾವತಿ ತಾಲ್ಲೂಕಿನ ಭದ್ರಾವತಿ ನಗರದಲ್ಲಿರುವ ಪ್ರಾಚೀನ ದೇವಾಲಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವು ತ್ರಿಕೂಟಾಚಲ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದ್ದು, ಮಳೆಯಿಂದಾಗಿ ಹಾಳಾಗಿದ್ದು, ಇದನ್ನು ಸಂಪೂರ್ಣವಾಗಿ ಸಂರಕ್ಷಿಸಬೇಕಾಗಿರುವುದರಿಂದ, ಕೇಂದ್ರ ಪ್ರಾಚ್ಯವಸ್ತು ಇಲಾಖೆಯಡಿ ಅಸುರಕ್ಷಿತ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಅಂದಾಜು ರೂ. 4.60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಗೃಹ ಸಚಿವರಾದ  ಆರಗ ಜ್ಞಾನೇಂದ್ರರವರು ಸಾಗರ ಶಾಸಕರಾದ ಹರತಾಳು ಹಾಲಪ್ಪರ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್  ಉಪಸ್ಥಿತರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *