
ಶಿವಮೊಗ್ಗ ಜು.27: ಜೂನ್ 28ರಂದು ರಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ದೂರಿನ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ರೂ.11 ಲಕ್ಷ ಮೌಲ್ಯದ 16 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಾಳಕೊಪ್ಪ ಪಿಎಸ್ಐ ನೇತೃತ್ವದ ಸಿಬ್ಬಂದಿಗಳ ತಂಡವು ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳಾದ ಶಿಕಾರಿಪುರ ಸಂಡ ಗ್ರಾಮದ ಸೈಯ್ಯದ್ ಇಸ್ರಾರ್, (26), ಶಿಕಾರಿಪುರ ಪುನೇದಹಳ್ಳಿಯ ರಾಕೇಶ್ (24), ಶಿಕಾರಿಪುರ ಟೌನ್ ನಿವಾಸಿ ಗೋಪಾಲ (28) ಎಂಬುವರನ್ನು ದಸ್ತಗಿರಿ ಮಾಡಿ, ಆರೋಪಿರಿಂದ ಕಳ್ಳತನ ಮಾಡಿದ ಅಂದಾಜು ಮೌಲ್ಯ 11,00,000/- ರೂ ಗಳ ಒಟ್ಟು 16 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.


ಶ್ರೀಗಂಧ ವಶ:
ಅಲಗಲದೇ ಇಟ್ಟಿಗೆ ಹಳ್ಳಿ ಅರಣ್ಯ ಉಪ ವಲಯ ವ್ಯಾಪ್ತಿಯಲ್ಲಿ ದಾಖಲಾದ 02 ಶ್ರೀ ಗಂಧದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 18,632 ರೂ ಗಳ 5 ಕೆಜಿ 480 ಗ್ರಾಂ ತೂಕದ ಶ್ರೀಗಂಧದ ತುಂಡು ಮತ್ತು ಚಕ್ಕೆಗಳು ಹಾಗೂ ಕೃತ್ಯಕ್ಕೆ ಬಳಸಿದ ಚಾವರ್ ಲೆಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
