Homeತೀರ್ಥಹಳ್ಳಿಪ್ರಮುಖ ಸುದ್ದಿಹೊಸನಗರ

ಫೋಟೋ ಜೂಮ್ ಮಾಡಿ ನೋಡಿ.. ಮಧ್ಯರಾತ್ರಿ ಹೆದ್ದಾರಿ ಮೇಲೆ ಕಂಡುಬಂದಿದ್ದೇನು..?

ತೀರ್ಥಹಳ್ಳಿ.ಜು.29: ಕೊಂಡ್ಲೂರಿನಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗದಲ್ಲಿ ಮಧ್ಯ ರಾತ್ರಿ ಸಾಗುವಾಗ ಬೊಬ್ಬಿ ಬಳಿ ಕಂಡು ಬಂದ ದೃಶ್ಯವಿದು.


ಎರಡು ಕಟ್ಟುಮಸ್ತಾದ ಕಾಡುಕೋಣಗಳು ಹೆದ್ದಾರಿ ಮೇಲೆ ಠಿಕಾಣಿ ಹೂಡಿದ್ದು.. ಜಪ್ಪಯ್ಯ ಅಂದರೂ ಅಲುಗಾಡುತ್ತಿರಲಿಲ್ಲ.. ಕಾರಿನಲ್ಲಿ ತೀರ್ಥಹಳ್ಳಿ ಆಸ್ಪತ್ರೆಗೆ ಹೋಗುತ್ತಿದ್ದವರು ಒಮ್ಮೆಲೆ ಕಾಡುಕೋಣಗಳನ್ನು ಕಂಡು ದಂಗಾಗುವಂತಾಗಿತ್ತು.  ಕಾಲು ಗಂಟೆ ಹೆದ್ದಾರಿಯಲ್ಲಿ ಮುಂದೆ ಸಾಗುವ ಧೈರ್ಯ ಮಾಡಲಿಲ್ಲ. ಬಳಿಕ ಕಾಡುಕೋಣಗಳು ನಿಧಾನವಾಗಿ ರಸ್ತೆ ಬದಿ ಸಾಗುತ್ತಿದ್ದಂತೆ ಮುಂದಿನ ಪಯಣ ಬೆಳೆಸಿದ್ದಾರೆ.

ದೂರದಲ್ಲಿ ನೋಡಿದಾಗ ಬೆಳ್ಳಗಿನ ನಾಲ್ಕು ಕಂಬಗಳು ಕಂಡು ಬಂದಿದ್ದು ಆರಂಭದಲ್ಲಿ ಮರಗಳ ಬುಡಕ್ಕೆ ಸುಣ್ಣ ಹೊಡೆದಿದ್ದು ಅದು ಎದ್ದು ಕಾಣುತ್ತಿವೆ ಅಂದುಕೊಂಡಿದ್ದೆವು.. ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಅವು ಕಾಡುಕೋಣಗಳು ಎಂದು ಗೊತ್ತಾಗಿದ್ದು. ಎರಡು ಕಾಡುಕೋಣಗಳು ಕಾರನ್ನೇ ದಿಟ್ಟಿಸಿ ನೋಡುತ್ತಿದ್ದು ಗಾಬರಿ ಹುಟ್ಟಿಸಿತ್ತು ಎನ್ನುತ್ತಾರೆ ಕಾರಿನಲ್ಲಿದ್ದ ನಾಗಭೂಷಣ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *