
ಹೊಸನಗರ. ಆ.14: ಭಾರತ ಕೇವಲ ಒಂದು ರಾಷ್ಟ್ರವಲ್ಲ. ಭಾವ ರಾಗ ತಾಳಗಳ ಮಿಳಿತ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಿಸಿದರು.
ಬಟ್ಟೆಮಲ್ಲಪ್ಪದಲ್ಲಿ ಸ್ವಾತೋಂತ್ರ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಈಸೂರು ತನಕ ಬುಲೆಟ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ, ಮನೆಮನೆಯೊಳಗೂ ರಾಷ್ಟ್ರ ಧ್ವಜವನ್ನು ಕಟ್ಟಬೇಕು ಎಂಬ ಪ್ರಧಾನಿ ಮೋದಿಯವರ ಸಂದೇಶ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ ಎಂದರು.
ನಾವೆಲ್ಲ ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಆದರೆ 75ನೇ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ಧನ್ಯರಾಗುವಂತೆ ಮಾಡಿದೆ ಎಂದರು.


ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ, ಜಾತಿ ಮತ ಪಕ್ಷಗಳನ್ನು ಮೀರಿ ಎಲ್ಲರೂ ಅಮೃತೋತ್ಸವದಲ್ಲಿ ಭಾಗಿಯಾಗುತ್ತಿರುವುದು ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯ ಸಂಕೇತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಯುವ ಮೋರ್ಚಾ ಅಧ್ಯಕ್ತ ನಿತಿನ್ ನಗರ, ಅಮೃತ ಮಹೋತ್ಸವೇ ವಿಶೇಷ ಅದರಲ್ಲು ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾಣುತ್ತಿರುವುದು ವಿಶೇಷ ಮೈಲಿಗಲ್ಲು ಅದನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ಬುಲೆಟ್ ಬೈಕ್ ರ‍್ಯಾಲಿಯನ್ನು ಆಯೋಜಿಸಿದ್ದು ಯಶಸ್ವಿಯಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಎಂಸಿಎ ನಿರ್ದೇಶಕ ಹೆಚ್.ಆರ್.ತೀರ್ಥೇಶ್, ರವಿ ಬಸರಾಣಿ, ನಾಗಾರ್ಜುನ್ ಸ್ವಾಮಿ, ಅರುಣಕುಗ್ವೆ, ಸಂತೋಷ್, ರಾಜೇಶ ಹಿರಿಮನೆ ಮತ್ತು ಯುವ ಮೋರ್ಚಾ ಪದಾಧಿಕಾರಿಗಳು, ತಾಲೂಕು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಜಾತಿ ಮತ ಪಕ್ಷಗಳನ್ನು ಮೀರಿ ಎಲ್ಲರೂ ಅಮೃತೋತ್ಸವದಲ್ಲಿ ಭಾಗಿಯಾಗುತ್ತಿರುವುದು ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯ ಸಂಕೇತವಾಗಿದೆ
ಟಿ.ಡಿ.ಮೇಘರಾಜ್, ಅಧ್ಯಕ್ಷ ಜಿಲ್ಲಾ ಬಿಜೆಪಿ
