
ಹೊಸನಗರ.ಆ.15: ಮೆಸ್ಕಾಂನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
75 ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೊಲ್ಲೂರಯ್ಯ ನೆನಪಿಗಾಗಿ ಅವರ ಮಗ ಎನ್.ಕೆ.ಶಿವಪ್ರಕಾಶ ಭಟ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ವಾತಂತ್ರ್ಯದ ಮಹತ್ವ ಮತ್ತು ಹಿರಿಯರ ತ್ಯಾಗ ಬಲಿದಾನದ ಕುರಿತಾಗಿ ಕುವೆಂಪು ವಿದ್ಯಾಶಾಲೆ ಸಂಸ್ಥಾಪಕ ಸೊನಲೆ ಶ್ರೀನಿವಾಸ್ ಉಪನ್ಯಾಸ ನೀಡಿದರು.

ಮೆಸ್ಕಾಂ ಎಇಇ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಗಿರೀಶ್, ಎಎಒ ರಾಘವೇಂದ್ರ, ಪರಶುರಾಮ್, ಮೆಸ್ಕಾಂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


