
ಹೊಸನಗರ.ಸೆ.07: ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ನೇಗಿಲೋಣಿ ಮೃತ ಅಂಬರೀಷ ಮನೆಗೆ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೆ ಮೃತ ಅಂಬರೀಷ್ ತಂದೆ ಸುಬ್ಬನಾಯ್ಕ ಆರೋಗ್ಯ ವಿಚಾರಿಸಿದರು. ಘಟನೆಯಿಂದ ದೃತಿಗೆಡದಂತೆ ಅವರಿಗೆ ಮನವಿ ಮಾಡಿದರು.
ಘಟನೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರಬರಲಿದೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂತೈಸಿದರು.
ನಗರ ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರಶೆಟ್ಟಿ, ಕರಿಮನೆ ಗ್ರಾಪಂ ಅಧ್ಯಕ್ಷ ದೇವೇಂದ್ರವನಾಯ್ಕ, ನಿಕಟಪೂರ್ವ ಅಧ್ಯಕ್ಷ ರಮೇಶ ಹಲಸಿನಳ್ಳಿ, ನಗರ ಸೊಸೈಟಿ ಉಪಾಧ್ಯಕ್ಷ ಕುಮಾರ್ ಹಿಲ್ಕುಂಜಿ, ಕಾನಬೈಲು ರಾಘವೇಂದ್ರ, ಅಂಡಗ ರಾಘು, ವಸಂತ ಹಿರಿನಗದ್ದೆ ಇದ್ದರು.
