
ಹೊಸನಗರ.ಸೆ.11: ಕೊಡಚಾದ್ರಿಯಲ್ಲಿ yellow & white ಬೋರ್ಡ್ ಜಟಾಪಟಿಗೆ ಕಾರಣವಾಗಿದ್ದು ಕೊಡಚಾದ್ರಿ ಗಿರಿಗೆ ಸಂಚರಿಸುವ ಜೀಪ್ ಚಾಲಕರು, ಮಾಲೀಕರು ನಡುವೆ ಕೊಡಚಾದ್ರಿ ಗೇಟ್ ಎದುರೇ ಜಗಳವಾಡಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ಕೊಡಚಾದ್ರಿ ಗಿರಿಗೆ ಕೊಲ್ಲೂರು, ನಿಟ್ಟೂರು, ಕಟ್ಟಿನಹೊಳೆ, ಸಂಪೇಕಟ್ಟೆ ಸೇರಿದಂತೆ ಸುತ್ತಮುತ್ತಲ ಭಾಗದಿಂದ ಹತ್ತಿರ ಹತ್ತಿರ 200 ಜೀಪ್ ಗಳು ಸಂಚರಿಸುತ್ತವೆ. ಇದರಲ್ಲಿ yellow ಮತ್ತು white ಬೋರ್ಡ್ ಹೊಂದಿರುವ ಜೀಪ್ ಗಳು ಸಂಪರ್ಕ ಸಾಧಿಸುತ್ತಿವೆ. ಆದರೆ ನಾವು ವರ್ಷಕ್ಕೆ 14 ಸಾವಿರ ಟ್ಯಾಕ್ಸ್ ಕಟ್ಟುತ್ತೇವೆ. ಪ್ರವಾಸಿಗರು, ಭಕ್ತಾಧಿಗಳನ್ನು ಹೊತ್ತು ಬಾಡಿಗೆ ಮಾಡುತ್ತೇವೆ. ಆದರೆ ಒಂದೇ ಬಾರಿ ಲೈಫ್ ಟ್ಯಾಕ್ಸ್ ಕಟ್ಟುವ white ಬೋರ್ಡ್ ಹೊಂದಿರುವ ಜೀಪ್ ಗಳಿಗೂ ಬಾಡಿಗೆ ಮಾಡುವ ಅವಕಾಶ ಕೊಟ್ಟರೆ ಹೇಗೆ ಎಂಬುದು yellow ಬೋರ್ಡ್ ಜೀಪ್ ಚಾಲಕ ಮತ್ತು ಮಾಲೀಕರ ಆಕ್ರೋಶ.


ಇನ್ನೊಂದೆಡೆ ನಮ್ಮ ಸ್ವಂತ ಕೆಲಸಕ್ಕೆ ವೈಟ್ ಬೋರ್ಡ್ ಜೀಪ್ ಹೊಂದಿದ್ದೇವೆ. ಹಾಗಂತ ಈ ಮಾರ್ಗದಲ್ಲಿ ವಾಹನ ಓಡಿಸುವಾಗೇ ಇಲ್ವಾ ಎಂಬುದು ವೈಟ್ ಬೋರ್ಡ್ ಮಾಲೀಕರ ಪ್ರಶ್ನೆ.
ಈ ವಿವಾದ ಸಾಕಷ್ಟು ಸಮಯದಿಂದ ಕೊಡಚಾದ್ರಿ ಪರಿಸರದಲ್ಲಿ ಹೊಗೆಯಾಡುತ್ತಲೇ ಇತ್ತು.
ಇದೀಗ ಬೀದಿ ಜಗಳಕ್ಕೆ ತಿರುಗಿದ್ದು ಗಿರಿಗೆ ತೆರಳುವ ಅರಣ್ಯ ಇಲಾಖೆಯ ಗೇಟ್ ಬಳಿಯೇ ಗಲಾಟೆ ಕಂಡು ಬಂದಿದೆ. ಹೀಗೆ ಜೀಪನ್ನು ಅಡ್ಡಗಟ್ಟುತ್ತಾ ಜಗಳ ಮಾಡಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಡಚಾದ್ರಿಗೆ ಜೀಪ್ ತಡೆಗಟ್ಟಿದ VIDEO ಗೆ ಲಿಂಕ್ ಕ್ಲಿಕ್ ಮಾಡಿ..
