
ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ ಅಂಬುಲೆನ್ಸ್ ಗಳಿಗೂ ತೊಂದರೆ
ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ ತೊಂದರೆಯಾಗಿದೆ.
ಆಗುಂಬೆಯ ಚೆಕ್ ಪೋಸ್ಟ್ ಬಳಿ ಬೃಹತ್ ಮರವೊಂದು ಮಂಗಳವಾರ ಸಂಜೆ ಧರೆಗೆ ಉರುಳಿದೆ. ಮರ ಉರುಳಿದ ಹಿನ್ನೆಲೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ವಾಹನಗಳು ನಿಲ್ಲುವಂತಾಗಿದೆ. ಟ್ರಾಫಿಕ್ ಜಾಮ್ ನಲ್ಲಿ ಆಂಬುಲೆನ್ಸ್ ಸಿಲುಕಿಕೊಂಡಿವೆ.


ಮಣಿಪಾಲ್ ಮತ್ತು ವೆನ್ ಲಾಕ್ ಗೆ ತೆರಳುವ ಅಂಬ್ಯುಲೆನ್ಸ್ ಗಳು ಸಾಲುಗಟ್ಟಿ ನಿಲ್ಲುವಂತಾಯಿತು. ತಕ್ಷಣ ವಿಷಯ ತಿಳಿದ ಆಗುಂಬೆ ಫೋಲೀಸ್ ಠಾಣೆ ಎಸ್ ಐ ಶಿವನಗೌಡ ಮರ ತೆರವುಗೊಳಿಸಿ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
