
ಅಂಡಗೋದೂರು| ಗಾಳಿ-ಮಳೆಗೆ ಮರದ ಬಿದ್ದು ಮನೆಗೆ ಬಾರೀ ಹಾನಿ
ಹೊಸನಗರ : ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಬೀಸುತ್ತಿರುವ ಗಾಳಿ-ಮಳೆಗೆ ಗುರುವಾರ ರಾತ್ರಿ ಅಂಡಗದುದೂರು ಗ್ರಾಮದ ವಾಸಿ ಲಲಿತಾ ಕೋಂ ರತ್ನಾಕರ್ ಎಂಬುವರ ಮನೆ ಮೇಲೆ ಬೃಹತ್ ಮರವೊಂದು ಏಕಾಏಕೀ ಮುರಿದು ಬಿದ್ದ ಪರಿಣಾಮ ಮನೆಗೆ ವ್ಯಾಪಕ ಹಾನಿಯಾಗಿದ್ದು ಮನೆಯಲ್ಲಿದ್ದರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಹೆರಟೆ ಆದರ್ಶ ಸಹಿತ ಅಧಿಕಾರಿಗಳು ಭೇಟಿ ನೀಡಿ ನಷ್ಟದ ವರದಿ ಕಲೆ ಹಾಕಿದ್ದಾರೆ.
