
ಹೊಸನಗರ ಆಶ್ರಯ ಸಮಿತಿಗೆ ನಾಲ್ವರು ನೇಮಕ
ಹೊಸನಗರ : ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮೂಲಕ ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಸತಿ/ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ನೂತನ ಸಮಿತಿ ರಚನೆಗೊಂಡಿದ್ದು, ಸಮಿತಿಯ ಸದಸ್ಯರಾಗಿ ಪಟ್ಟಣದ ವಾಸಿಗಳಾದ ರಾಧಿಕಾ ಕೋಂ ರತ್ನಾಕರ ಶ್ರೇಷ್ಠಿ ನಾಸೀರ್ ಬಿನ್ ಅಬುಬೂಕರ್ (ಅಲ್ಪಸಂಖ್ಯಾತ) ಹಾಗೂ ಮೂರ್ತಿ ಬಿನ್ ರಾಮಸ್ವಾಮಿ (ಪರಿಶಿಷ್ಟ ಜಾತಿ) ಹಾಗೂ ಬಿ.ಆರ್ ಪ್ರಭಾಕರ್ ಬಿನ್ ರಾಮಚಂದ್ರ ನಾಯಕ್ ಅವರನ್ನು ನಾಮ ನಿರ್ದೇಶನ ಮಾಡಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
