- ಭದ್ರಾವತಿ ಪೇಪರ್ ಟೌನ್ ಪ್ರೌಢಶಾಲೆ ಉಳಿಸಿಕೊಡಿ.. ಇದು ಇಲ್ಲಿರುವ ಅನುದಾನಿತ ಏಕೈಕ ಆಂಗ್ಲ ಮಾಧ್ಯಮ ಪ್ರೌಢಶಾಲೆ.. ಎಂಪಿಎಂ ಕಾರ್ಖಾನೆ ಮುಚ್ಚಿದ್ದ ಕಾರಣ ವಿದ್ಯಾರ್ಥಿಗಳ ಕೊರತೆ.. ಶಿಕ್ಷಕರ ವರ್ಗಾವಣೆಯಿಂದ ಮುಚ್ಚುವ ಭೀತಿ..
ಭದ್ರಾವತಿ: ಪೇಪರ್ ಟೌನ್ ಪ್ರೌಢಶಾಲೆ ಸುಧೀರ್ಘ ಇತಿಹಾಸ ಹೊಂದಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗದ್ದು, ಎಂಪಿಎಂ ಕಾರ್ಖಾನೆಯು ಮುಚ್ಚಲ್ಪಟ್ಟ ಪರಿಣಾಮವಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆ ಎದುರಿಸುತ್ತಿರುವ ಕಾರಣ ಮುಚ್ಚುವ ಹಂತ ತಲುಪಿದೆ.
ಈಗಾಗಲೇ ಹಲವು ಶಿಕ್ಷಕರು ನಿವೃತ್ತರಾಗಿ ದ್ದಾರೆ, ಮತ್ತೆ ಕೆಲವರು ನಿವೃತ್ತ ಅಂಚಿನಲ್ಲಿ ದ್ದಾರೆ. ಅಲ್ಲದೆ ಮತ್ತೊರ್ವ ಕನ್ನಡ ಶಿಕ್ಷಕ ವರ್ಗಾವಣೆ ಯಾಗುತ್ತಿರುವ ಉದ್ದೇಶದಿಂದ ಶಾಲೆ ಮುಚ್ಚುವ ಭೀತಿ ಇದೆ.
ಈ ಹಿನ್ನಲೆಯಲ್ಲಿ ಶಾಲೆಯ ಮುಖ್ಯಧ್ವಾರದ ಮುಂಭಾಗ ಹಳೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶಾಸಕರ ಗೃಹ ಕಚೇರಿಗೆ ತೆರಳಿ ಶಾಲೆ ಉಳಿವಿಗಾಗಿ ಮನವಿ ಸಲ್ಲಿಸಲಾಯಿತು.
ಮುಂದೊಂದು ದಿನ ಕಾರ್ಖಾನೆ ಪುನರಾರಂಭಗೊಳ್ಳುವ ಭರವಸೆ ಹೊಂದಿರುವ ಹಳೇ ವಿದ್ಯಾರ್ಥಿಗಳು ನಗರದ ಏಕೈಕ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಅನುದಾನಿತ ಶಾಲೆಯಾಗಿದ್ದು ಅದನ್ನು ಉಳಿಸಿಕೊಳ್ಳಲೇ ಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಈಗಾಗಲೇ ವಿಜ್ಞಾನ ಶಿಕ್ಷಕರ ನಿವೃತ್ತಿಯಿಂದಾಗಿ ಸ್ವಲ್ಪ ಮಟ್ಟಿನ ತೊಂದರೆಗೊಳಗಾಗಿದೆ, ಈ ನಡುವೆ ನವೆಂಬರ್ ತಿಂಗಳಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿಯವರು ನಿವೃತ್ತಿಯಾಗಲಿದ್ದಾರೆ.ಮುಂದಿನ ವರ್ಷ ಗಣಿತ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. ಇವೆಲ್ಲದರ ನಡುವೆ ಕನ್ನಡ ಶಿಕ್ಷಕರು ವರ್ಗಾವಣೆಗೆ ಆದೇಶ ಪಡೆದಿದ್ದು ಸರಿಯಾದ ಕ್ರಮವಲ್ಲ.
ಶಾಲೆಯ ಹಿತಾದೃಷ್ಟಿ, ಅಲ್ಲಿಯ ಶಿಕ್ಷಕರ ಸೇವಾಭದ್ರತೆ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ವರ್ಗಾವಣೆ ನೀಡಿರುವ
ಎನ್ ಒಸಿ ಯನ್ನು ರದ್ದುಪಡಿಸಿ ಕನ್ನಡ ಶಿಕ್ಷಕರನ್ನು ಬಿಡುಗಡೆಗೊಳಿಸಬಾರದೆಂದು ಶಾಸಕರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಕಸ್ಮಾತ್ ಕಾರ್ಖಾನೆ ಆಡಳಿತ ಮಂಡಳಿಗೆ ವರ್ಗಾವಣೆ ಕುರಿತು ಮಾತನಾಡಿದ್ದೇ ಆದಲ್ಲಿ ವಿದ್ಯಾರ್ಥಿ ಪೋಷಕರು ಹಾಗೂ ನಗರದ ಜನರೊಂದಿಗೆ ರಸ್ತೆಗಿಳಿದು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ
ಸೆಲ್ವರಾಜ್,ಲಿಂಗೋಜಿ ರಾವ್, ಕಮಲಾಕರ್,ಬಸವರಾಜ್ ಸೇರಿದಂತೆ ಅನೇಕರಿದ್ದರು.