
-
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದ
-
ನಾನೇ ಪ್ರಬಲ ಅಭ್ಯರ್ಥಿಯಾಗುವೆ. ಅವಕಾಶ ನೀಡಿದರೆ ಗೆದ್ದು ಬರುತ್ತೇನೆ.
-
ಈಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಇನ್ನಷ್ಟೇ ಚರ್ಚೆ ಮಾಡಬೇಕು.
-
ಬೇರೆ ಯಾರಿಗಾದರು ಟಿಕೇಟ್ ನೀಡಿದರೆ ಸಮಸ್ಯೆ ಇಲ್ಲ
-
ಬೆಂಗಳೂರಿನಲ್ಲಿ ಶಾಸಕ ಬೇಳೂರು ಹೇಳಿಕೆ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದರೆ ನಾನೇ ಗೆದ್ದು ಬರುತ್ತೇನೆ ಎಂದು ಸಾಗರ ಶಾಸಕ, ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ. ಶಿವಮೊಗ್ಗ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ. ನನಗೆ ಟಿಕೆಟ್ ಕೊಟ್ಟರೆ ನಾನೇ ಗೆಲ್ಲುತ್ತೇನೆ. ಇದರ ಬಗ್ಗೆ ನಮ್ಮ ನಾಯಕರ ಜತೆ ಇನ್ನಷ್ಟೇ ಚರ್ಚಿಸಬೇಕಿದೆ ಎಂದು ಹೇಳಿದ್ದಾರೆ.


ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿ. ಕುಮಾರ್ ಬಂಗಾರಪ್ಪ ಅವರನ್ನು ಕರೆತಂದು ಟಿಕೆಟ್ ಕೊಡುವ ಚರ್ಚೆ ಪಕ್ಷದಲ್ಲಿ ನಡೆದಿಲ್ಲ. ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೆ ಸಮಸ್ಯೆ ಇಲ್ಲ, ಅಭ್ಯಂತರವೂ ಇಲ್ಲ. ಆದರೆ, ನಾನು ಪ್ರಬಲ, ಸಮರ್ಥ ಅಭ್ಯರ್ಥಿ ಆಗಬಲ್ಲೆ ಎಂದು ಹೇಳಿದರು.
ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಊಟಕ್ಕೆ ಕರೆದರೆ ಅದು ಬಣ ರಾಜಕಾರಣ ಆಗಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಯಾಕೆ ಏರ್‌ಪೋರ್ಟ್ ಮಾಡಿದ್ರು ಅನ್ನೋದು ಗೊತ್ತಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಮೀನು ಇದೆ ಅದಕ್ಕಾಗಿ ಏರ್‌ಪೋರ್ಟ್ ಮಾಡಿದರು ಎಂದು ಆರೋಪಿಸಿದರು.
