Homeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿರಾಜ್ಯ

ಮೊಣಕಾಲು, ಮೊಣ‌ಕೀಲು, ಸೊಂಟ ಹೋವಿಗೆ ರೋಬೋಟ್ ಮಾದರಿ ಉಚಿತ ಶಸ್ತ್ರಚಿಕಿತ್ಸೆ, ತಪಾಸಣಾ ಶಿಬಿರ |ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಫೆ.7 ರಂದು |

ಮೊಣಕಾಲು, ಮೊಣ‌ಕೀಲು, ಸೊಂಟ ಹೋವಿಗೆ ರೋಬೋಟ್ ಮಾದರಿ ಉಚಿತ ಶಸ್ತ್ರಚಿಕಿತ್ಸೆ, ತಪಾಸಣಾ ಶಿಬಿರ

|ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಫೆ.7 ರಂದು |

ಹೊಸನಗರ: ಬಟ್ಟೆಮಲ್ಲಪ್ಪ: ಅತ್ಯಾಧುನಿಕ ರೋಬೋಟ್ ತಂತ್ರಜ್ಞಾನದ ಮೂಲಕ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಹಾಗೂ ಕ್ರೀಡಾ ಗಾಯಗಳಿಗೆ (Sports Injury) ಸಂಬಂಧಿಸಿದಂತೆ ಬೃಹತ್ ಉಚಿತ ತಪಾಸಣಾ ಶಿಬಿರವನ್ನು ಫೆಬ್ರವರಿ 7 ರಂದು ರಿಪ್ಪನ್‌ಪೇಟೆಯ ಜಿ.ಎಸ್.ಬಿ ಸಮಾಜದ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಮಂಗಳೂರಿನ ಪ್ರತಿಷ್ಠಿತ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ರೋಟರಿ ಕ್ಲಬ್ ರಿಪ್ಪನ್‌ಪೇಟೆ, ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಬಟ್ಟೆಮಲ್ಲಪ್ಪ ಹಾಗೂ ಜಿ.ಎಸ್.ಬಿ ಸಮಾಜ ರಿಪ್ಪನ್‌ಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಲಿದೆ.

ತಜ್ಞ ವೈದ್ಯರ ಲಭ್ಯತೆ
ಯೆನೆಪೋಯ ಆಸ್ಪತ್ರೆಯ ನುರಿತ ಆರ್ಥ್ತೋಪ್ಲಾಸ್ಟಿ ಸರ್ಜನ್ ಡಾ. ಶರತ್ ಬಾಳೆಮನೆ ನೇತೃತ್ವದ ತಜ್ಞ ವೈದ್ಯರ ತಂಡವು ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಗೆ ತಪಾಸಣೆಗೆ ಅವಕಾಶವಿರುತ್ತದೆ ಎಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಹಾಗೂ ರೋಟರಿ ಅಧ್ಯಕ್ಷ ಕೃಷ್ಣರಾಜು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಶಸ್ತ್ರಚಿಕಿತ್ಸೆಯ ಅವಕಾಶ
ಶಿಬಿರದಲ್ಲಿ ಆಯ್ಕೆಯಾದ ಅರ್ಹ ರೋಗಿಗಳಿಗೆ ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಸರ್ಕಾರಿ ಸೌಲಭ್ಯಗಳಾದ:
ಆಯುಷ್ಮಾನ್ ಭಾರತ್ (Arogya Karnataka)
ಬಿಪಿಎಲ್ ಕಾರ್ಡ್ / ಯಶಸ್ವಿನಿ
ESI ಮತ್ತು ವಿವಿಧ ಆರೋಗ್ಯ ವಿಮಾ ಪಾಲಿಸಿ
ಹೊಂದಿರುವವರಿಗೆ ಶಸ್ತ್ರಚಿಕಿತ್ಸೆಯು ಸಂಪೂರ್ಣ ಉಚಿತವಾಗಿರಲಿದೆ. ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ಹಾಗೂ ತಮ್ಮಲ್ಲಿರುವ ಆರೋಗ್ಯ ಕಾರ್ಡ್‌ಗಳ ದಾಖಲೆಗಳನ್ನು ತರುವುದು ಕಡ್ಡಾಯವಾಗಿದೆ.

ಯಾರಿಗೆ ಉಪಯುಕ್ತ?
ತೀವ್ರವಾದ ಮೊಣಕಾಲು ನೋವು, ಊತ, ನಡೆಯಲು ಕಷ್ಟವಾಗುವ ಸಮಸ್ಯೆ, ಸೊಂಟದ ಸಂಧಿನ ನೋವು ಹಾಗೂ ಎಸಿಎಲ್ ಲಿಗಮೆಂಟ್ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.

ಉಚಿತ ವಾಹನ ಹಾಗೂ ರಕ್ತದಾನ ಶಿಬಿರ
ಶಿಬಿರಾರ್ಥಿಗಳ ಅನುಕೂಲಕ್ಕಾಗಿ ಬಟ್ಟೆಮಲ್ಲಪ್ಪ ಸರ್ಕಲ್‌ನಿಂದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವತಿಯಿಂದ ಬೆಳಿಗ್ಗೆ 9:45ಕ್ಕೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರವೂ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಮಾಹಿತಿಗಾಗಿ ಸಂಪರ್ಕಿಸಿ: 8152941498 ಅಥವಾ 94487 21650.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *