ಇತಿಹಾಸ ಪ್ರಸಿದ್ಧ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ಬೆಳಗಿದ 10 ಸಾವಿರ ಹಣತೆ: ಸಂಭ್ರಮದ ಕಾರ್ತಿಕ ದೀಪೋತ್ಸವ
ಹೊಸನಗರ: ಇತಿಹಾಸ ಪ್ರಸಿದ್ಧ ಬಿದನೂರಿನ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿ ಸಂಭ್ರಮದ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡು 10 ಸಾವಿರ ಹಣತೆಗಳು ಬೆಳಗಿ ಭಕ್ತರ ಮನಸೂರೆಗೊಂಡಿತು.
ಭಾನುವಾರ ಬೆಳಿಗ್ಗೆಯಿಂದಲೇ ಶಿವಪಾರ್ವತಿ ಸನ್ನಿಧಿಯಲ್ಲಿ ಶತರುದ್ರ ಅಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀ ದೇವರ ಪುರೋತ್ಸವ, ರಾತ್ರಿ ಸಹಸ್ರಾಧಿಕ ದೀಪೋತ್ಸವ, ಮಹಾ ಮಂಗಳಾರತಿ ವಿಶೇಷವಾಗಿ ನೆರವೇರಿತು.
ಸಾಕಷ್ಟು ಸಂಖ್ಯೆಯಲ್ಲಿ ಭಕ್ರ ಸಮೂಹ ಪಾಲ್ಗೊಂಡು ಹಣತೆ ಬೆಳಗುವ ಮೂಲಕ ಧನ್ಯತಾಭಾವ ಪಡೆದರು.
ಪ್ರಧಾನ ಅರ್ಚಕ ಪರಮೇಶ್ವರ ಭಟ್, ಭಾಸ್ಕರ್ ಭಟ್ ನೇತೃತ್ವದಲ್ಲಿ ಸಹಸ್ರಾಧಿಕ ದೀಪೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು.
ಶ್ರೀಕರ ನಗರ, ಸುಬ್ರಹ್ಮಣ್ಯ ಆಚಾರ್, ಅಕ್ಷಯ ಚಿಕ್ಕಪೇಟೆ, ಜಯರಾಮ ಇಂದ್ರೋಡಿ, ರಘು ದೇವಗಂಗೆ, ಪವನ, ಕುಮಾರ ದಳವಾಯಿಜೆಡ್ಡು, ರಾಮಚಂದ್ರ, ಗೋಪಾಲ, ನಾಗರಾಜ ಹಿರೇಮಠ, ನವೀನ ಎಸ್.ಕೆ, ಆಟೋ ಆಸಿಫ್, ಸುಧೀಂದ್ರ ಭಂಡಾರಕರ್ ಸೇರಿದಂತೆ ಅನೇಕರು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾಗಿದ್ದು ಅವರಿಗೆ ಅರ್ಚಕ ಭಾಸ್ಕರ ಭಟ್ ಕೃತಜ್ಞತೆ ಸಲ್ಲಿಸಿದರು.