
ಹೊಸನಗರ: ಮಾವಿನಕೊಪ್ಪದಲ್ಲಿರುವ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಒಡೆದ ಘಟನೆ ನಡೆದಿದೆ.
ಕಾಲೇಜಿನ ಗೇಟ್, ಆಫೀಸ್ ಛೇಂಬರ್, ವಿಜ್ಞಾನ ವಿಭಾಗ ಕಚೇರಿ ಸೇರಿದಂತೆ ಮೂರು ಕಡೆ ಬೀಗ ಮುರಿಯಲಾಗಿದೆ.
ಒಳಗೆ ನುಗ್ಗಿದ ದುಷ್ಕರ್ಮಿಗಳು ಫೈಲ್ ಗಳನ್ನು ಚೆಲ್ಲಾಡಿದ್ದಾರೆ. ಆದರೆ ಯಾವುದೇ ಕಂಪ್ಯೂಟರ್ ಗಳನ್ನು ಡಿಸ್ಟರ್ಬ್ ಮಾಡಿಲ್ಲ. ರಾತ್ರಿ ಘಟನೆ ನಡೆದಿದ್ದು ಬೆಳಿಗ್ಗೆ ಗಮನಕ್ಕೆ ಬಂದಿದೆ. ಘಟನೆಯ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ.
ಇಂದು ಪರೀಕ್ಷೆ ಇತ್ತು:
ಬಿಎ ಅಂತಿಮ ವಿಭಾಗದ ವಿದ್ಯಾರ್ಥಿಗಳಿಗೆ ಶುಕ್ರವಾರ ಪರೀಕ್ಷೆ ಇದ್ದು. ಪ್ರಶ್ನೆ ಪತ್ರಿಕೆಗಳಿಗೆ ತೊಂದರೆ ಆಗಿಲ್ಲ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಾಂಶುಪಾಲ ಪ್ರಭಾಕರ್ ರಾವ್, ಕಾಲೇಜಿನಲ್ಲಿ ಬೀಗ ಮುರಿದಿದ್ದು, ಒಳಗಡೆ ಫೈಲ್ ಗಳು ಚೆಲ್ಲಾಪಿಲ್ಲಿಯಾಗಿವೆ. ಆದರೆ ಪ್ರಶ್ನೆ ಪತ್ರಿಕೆ ಸುರಕ್ಷಿತವಾಗಿದೆ. ಹಣಕ್ಕಾಗಿ ಹುಡುಕಾಟ ನಡೆಸಿರಬಹುದು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಈ ಸಂಬಂಧ ಹೊಸನಗರ ಪೊಲೀಸರು, ತನಿಖೆ ಕೈಗೊಂಡಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ.
