Homeತಾಲ್ಲೂಕುತೀರ್ಥಹಳ್ಳಿಭದ್ರಾವತಿಶಿಕಾರಿಪುರಶಿರಾಳಕೊಪ್ಪ

ಕೆನರಾಬ್ಯಾಂಕಿನಿಂದ ಚಿಕ್ಕಪೇಟೆ ಪ್ರೌಢಶಾಲೆಗೆ ರೂ.1.35 ಲಕ್ಷ ಪೀಠೋಪಕರಣ ಮತ್ತು ಯುಪಿಎಸ್ ಕೊಡುಗೆ

ಕೆನರಾಬ್ಯಾಂಕಿನಿಂದ ಚಿಕ್ಕಪೇಟೆ ಪ್ರೌಢಶಾಲೆಗೆ ರೂ.1.35 ಲಕ್ಷ ಪೀಠೋಪಕರಣ ಮತ್ತು ಯುಪಿಎಸ್ ಕೊಡುಗೆ

ಹೊಸನಗರ: ಗ್ರಾಮೀಣ ಮಕ್ಕಳ ಉತ್ತಮ ವ್ಯಾಸಂಗಕ್ಕಾಗಿ ಕೆನರಾ ನಿರಂತರ ಕೊಡುಗೆ ನೀಡುತ್ತಾ ಬಂದಿದೆ ಎಂದು ಕೆನರಾ ಬ್ಯಾಂಕ್ ಶಿವಮೊಗ್ಗ ವಿಭಾಗದ ಎಜಿಎಂ ಎಂ.ಕೆ.ರಾಠೋಡ್ ಹೇಳಿದರು.

ತಾಲೂಕಿನ ಚಿಕ್ಕಪೇಟೆ ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೆನರಾ ಬ್ಯಾಂಕ್ ಸಿಎಸ್‌ಆರ್ ಚಟುವಟಿಕೆಯಡಿ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಗೆ ರೀ.1.35 ಲಕ್ಷ ವೆಚ್ಚದ ಪೀಠೋಪಕರಣ ಮತ್ತು ಯುಪಿಎಸ್ ನೀಡಲಾಗಿದೆ ಇದನ್ನು ಸಧ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಶಾಲಾಭಿವೃದ್ಧಿ ಸಮಿತಿವತಿಯಿಂದ ಎಂ.ಕೆ.ರಾಠೋಡ್‌ರಿಗೆ ಸನ್ಮಾನಿಸಿ ಕೊಡುಗೆ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಹಲಸಿನಳ್ಳಿ, ಉಪಾಧ್ಯಕ್ಷೆ ಅಶ್ವಿನಿ ರಮೇಶ್, ಕೆನರಾಬ್ಯಾಂಕ್ ಶಾಖಾ ಪ್ರಬಂಧಕ ನಿತಿನ್ ಎಂ.ಜಿ, ಸುನಿಲ್, ಮುಖ್ಯಶಿಕ್ಷಕ ಡಾ.ಜಿ.ಸುಧಾಕರ್, ಕರುಣಾಕರ ಶೆಟ್ಟಿ, ಸುಮನಾ ಭಾಸ್ಕರ್ ಹಲವರು ಉಪಸ್ಥಿತರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *