ಪ್ರಮುಖ ಸುದ್ದಿ

Get Latest news Kannada. Live news Kannada. Kannada live news updates. Karnataka news. ಕನ್ನಡ ಸುದ್ದಿಗಳು. ಕನ್ನಡ ತಾಜಾ ಸುದ್ದಿಗಳು.

ಹೊಸನಗರ ಹಿಂದೂ ಮಹಾಸಭಾದಿಂದ ಅದ್ದೂರಿ ಗಣೇಶೋತ್ಸವ : ತಾಲೂಕು ಅಧ್ಯಕ್ಷ ಎಂ.ಎನ್.ರಾಜು

ಹೊಸನಗರ: ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ 4ನೇ ವರ್ಷದ ಗಣೇಶೋತ್ಸವ, ದಿನಾಂಕ 31 ಆಗಸ್ಟ್ 2022 ರ ಬೆಳಗ್ಗೆ 10 ಗಂಟೆಗೆ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಬೃಹತ್ ಪ್ರತಿಷ್ಠಾಪನ ಮೆರವಣಿಗೆ ನೆಡೆಯಲಿದ್ದು ಗಣಪತಿಯನ್ನು ಪೋಸ್ಟ್ ಆಫೀಸ್ ಪಕ್ಕದ…

ಪಂಕ್ಚರ್ ಆಗಿ ವಾರ ಆಯ್ತು | 108 ಅಂಬುಲೆನ್ಸ್ ಅವ್ಯವಸ್ಥೆ | ಹೊಸನಗರ ಆಯ್ತು ಇದೀಗ ನಗರದ ಸರದಿ

ಹೊಸನಗರ: ತಾಲೂಕು ಕೇಂದ್ರದ 108 ಅಂಬುಲೆನ್ಸ್ ಅವ್ಯವಸ್ಥೆ ನೋಡಿ ಆಯ್ತು.. ದುರಸ್ಥಿಗೊಂಡು ಸೇವೆಗೂ ಸಜ್ಜಾಯ್ತು.. ಇದೀಗ ನಗರ ಹೋಬಳಿ ಕೇಂದ್ರದ 108 ಅಂಬುಲೆನ್ಸ್ ಸರದಿ.. ಕಳೆದ ಕೆಲವು ಸಮಯದಿಂದ 108 ಸೇವೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಅಲ್ಲದೇ ಟಯರ್ ಪಂಕ್ಚರ್ ಆಗಿ…

ತನ್ನ ಬಂದೂಕಿಗೆ ತಾನೇ ಬಲಿಯಾದ ಯುವಕ | ಕಾಲುಜಾರಿ ಬಿದ್ದು ದುರ್ಘಟನೆ | ನೇಗಿಲೋಣಿಯಲ್ಲಿ ಮಡುಗಟ್ಟಿದ ಶೋಕ

ಹೊಸನಗರ: ತೋಟಕ್ಕೆ ಬರುವ ಕಾಡುಪ್ರಾಣಿಗಳನ್ನು ಓಡಿಸಿ ಬರಲು ಹೋದ ಯುವಕ ನೋರ್ವ ನಿರ್ಲಕ್ಷತನದಿಂದ ಕಾಲುಜಾರಿ ಬಿದ್ದು ನಾಡಬಂದೂಕಿಗೆ ಬಲಿಯಾದ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೇಗಿಲೋಣಿಯಲ್ಲಿ ನಡೆದಿದೆ. ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ನೇಗಿಲೋಣಿ ನಿವಾಸಿ ಅಂಬರೀಷ (30)…

ಸಾಗರದ ಮೃತ ಪತ್ರಿಕಾ ವಿತರಕ ಮೃತಕುಟುಂಬಕ್ಕೆ ರೂ.2ಲಕ್ಷ ಪರಿಹಾರ| ಹಣ ಬಿಡುಗಡೆಗೆ ಸರ್ಕಾರದ ಆದೇಶ

ಬೆಂಗಳೂರು.ಆ.25: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ಮನವಿ ಮೇರೆಗೆ ಸಾಗರದ ಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ 2ಲಕ್ಷ ರೂ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ರಾಜ್ಯ…

ಮಾಧ್ಯಮ ಮಾನ್ಯತಾ ಸಮಿತಿ ನೂತನ ಸದಸ್ಯರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ

ಬೆಂಗಳೂರು: ನೈಜ ಪತ್ರಕರ್ತರನ್ನು ಒಳಗೊಂಡ ಮಾಧ್ಯಮ ಮಾನ್ಯತಾ ಸಮಿತಿ ರಚನೆಯಾಗಿರುವುದು ಆ ಸಮಿತಿ ಘನತೆ ಹೆಚ್ಚಿಸಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ಮಾಧ್ಯಮ ಮಾನ್ಯತಾ ಸಮಿತಿ…

ಕಲೆಗೆ ಕಲಾ ಪ್ರೇಕ್ಷಕರೇ ಪ್ರೇರಕ ಶಕ್ತಿ | ಸನ್ಮಾನ ಸ್ವೀಕರಿಸಿದ ಭಾಗವತ ಜನ್ಸಾಲೆ ಅಭಿಮತ

ರಿಪ್ಪನ್‌ಪೇಟೆ;-ಗಂಡುಮೆಟ್ಟಿನ ಯಕ್ಷಗಾನ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರೇಕ್ಷಕರ ಕಾರ್ಯ ಮುಖ್ಯವಾಗಿದೆ ಎಂದು ಭಾಗವತರಾದ ಜನ್ಸಾಲೆ ರಾಘವೇಂದ್ರ ಅಚಾರ್ಯ ಹೇಳಿದರು. ರಿಪ್ಪನ್‌ಪೇಟೆ ಮಿತ್ರಬಳಗ ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಭಾರತ…

ಶಿವಮೊಗ್ಗ ನಗರ ಎಂದಿನಂತಿಲ್ಲ.. ಯುವ ಮನಸ್ಸುಗಳಲ್ಲಿ ದ್ವೇಷ ಹೆಚ್ಚುತ್ತಿದೆ | ದ್ವೇಷ ಕಿತ್ತು ಹಾಕೋಣ.. ಮಾತನಾಡೋಣ ಬನ್ನಿ ಎಂದಿದ್ದಾರೆ ಕೆ.ಪಿ.ಶ್ರೀಪಾಲ್

ಶಿವಮೊಗ್ಗ : ಶಿವಮೊಗ್ಗ ನಗರ ಎಂದಿನಂತಿಲ್ಲ. ಯುವ ಮನಸ್ಸುಗಳಲ್ಲಿ ದ್ವೇಷ ಮೂಡುತ್ತಿದೆ. ಇದು ನಾಗರೀಕ ಸಮಾಜದ ಲಕ್ಷಣವಲ್ಲ. ನಗರದ ವ್ಯಾಪಾರಸ್ತರು, ಹೊಟೇಲ್ ಉದ್ಯಮಿಗಳು, ಶಾಲಾ ಕಾಲೇಜುಗಳ ಮಕ್ಕಳು, ಪೋಷಕರು, ಆಟೋ ಮತ್ತು ಸಿಟಿ ಬಸ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ…

ನಾಯಿಗಳ ದಾಳಿಯಿಂದ ಗ್ರೇಟ್ ಎಸ್ಕೇಪ್.! | ಬಳಿಕ ಹೃದಯಾಘಾತದಿಂದ ಮೃತಪಟ್ಟ ಕಡವೆ | ಬೈಸೆ ಗ್ರಾಮದಲ್ಲಿ ನಡೆದ ಘಟನೆ

ಹೊಸನಗರ.ಆ.20: ನಾಯಿಗಳ ದಾಳಿಗೆ ಸಿಲುಕಿ ಗ್ರೇಟ್ ಎಸ್ಕೇಪ್ ಆದ ಕಡವೆಯೊಂದು ಬಳಿಕ ಹೃದಯಾಘಾತದಿಂದ ಸಾವನಪ್ಪಿದ ಘಟನೆ ತಾಲೂಕಿನ ಬೈಸೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಮಧ್ಯಾಹ್ನ ನಾಯಿಗಳ ದಾಳಿಗೆ ಸಿಲುಕಿದ ಕಡವೆ ಕೊನೆಗೂ ತಪ್ಪಿಸಿಕೊಂಡಿದೆ. ಇದನ್ನು ನೋಡಿದ ಸ್ಥಳೀಯರು ಅರಣ್ಯ…

ಹೊಸನಗರಕ್ಕೆ ಅಂತೂ ಬಂತು.. 108 ಅಂಬುಲೆನ್ಸ್ : ಇಂದಿನಿಂದ ಸೇವೆಗೆ ಲಭ್ಯ

ಹೊಸನಗರ.ಆ.20: ಹಲವು ಸಮಯದಿಂದ ತಾಲೂಕು ಕೇಂದ್ರ ಹೊಸನಗರಕ್ಕೆ ವಂಚಿತವಾಗಿದ್ದ 108 ಅಂಬುಲೆನ್ಸ್ ಸೇವೆ ಲಭ್ಯವಾಗಿದೆ. ದುರಸ್ಥಿಯ ನೆಪದಲ್ಲಿ ಹೊಸನಗರದಲ್ಲಿ 108 ತುರ್ತುವಾಹನ ಲಭ್ಯವಿರಲಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ಸೇವೆ ಸಿಗದೆ ಬಡ ರೈತಕೂಲಿಕಾರ್ಮಿಕರು ನಲುಗುವಂತಾಗಿದೆ…

ಪಂಚಾಚಾರಗಳು ಮನುಕುಲದ ಅಭ್ಯುದಯದ ಸಾಧನ | ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ

ಶಿವಮೊಗ್ಗ.ಆ.14: ಬಸವಾದಿ ಶರಣರು ಪ್ರತಿಪಾದಿಸಿದ ಪಂಚಾಚಾರಗಳು ಯಾವುದೇ ಸಮುದಾಯದ ಅಭ್ಯುದಯಕ್ಕೆ ಕಾರಣವಾಗಬಲ್ಲುವು. ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ತಿಳಿಸಿದರು. ಬಸವಕೇಂದ್ರದಲ್ಲಿ ಶಿವಾನುಭವ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಅವರು,…