ಹೊಸನಗರಪ್ರಮುಖ ಸುದ್ದಿ

ವೀರ್ ಸಾವರ್ಕರ್ ಅಪ್ರತಿಮ‌ ದೇಶ ಭಕ್ತ | ಅವರ ಭಾವಚಿತ್ರಕ್ಕೆ ಅವಮಾನ.. ವಿಕೃತ ಮನಸ್ಸಿನ ಅನಾವರಣ | ರಿಪ್ಪನಪೇಟೆ ದಿಕ್ಸೂಚಿ ಭಾಷಣದಲ್ಲಿ ಚೈತ್ರಾ ಕುಂದಾಪುರ

ರಿಪ್ಪನ್‌ಪೇಟೆ :ಸಂಕಷ್ಟ ನಿವಾರಕ ಗಜಮುಖ ಪ್ರಥಮ ಪೂಜಿತ. ಸಿದ್ದಿವಿನಾಯಕನ ಆರಾಧನೆಯಲ್ಲಿ ಪ್ರತಿಯೊಬ್ಬರು ತೊಡಗುತ್ತಾರೆ. ಅತನ ಅಶೀರ್ವಾದ ಜಗತ್ತಿನ ಪ್ರತಿಯೊಬ್ಬರಿಗೂ ನಿರಂತರವಾಗಿರಲಿ. ಜನರು ಶಾಂತಿ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಕುಂದಾಪುರ ಕುಮಾರಿ ಚೈತ್ರ ಹೇಳಿದರು.

ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರೀಯ ಸೇನಾ ಸಮಿತಿಯ 55 ವರ್ಷದ ಗಣೇಶೋತ್ಸವದ ಅರನೇ ದಿನದ ಅಂಗವಾಗಿ ದಿಕ್ಸೂಚಿಭಾಷಣ ಮಾಡಿದ ಅವರು, ಹಿಂದೂ ಸಾಮಾಜ್ಯದ ಸಂರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ  ಹೋರಾಟಗಾರ ವೀರಸಾವರ್ಕರ್ ನಮ್ಮ ಹಿಂದೂ ಧರ್ಮದ ಮಹಾನ್ ಚೇತನಗಳಲ್ಲಿ ಒಬ್ಬರು. ಅವರ ಅದರ್ಶ ತತ್ವಗಳು ನಮ್ಮ ಹಿಂದೂ ಸಮಾಜದ ರಕ್ಷಣೆಗೆ ಮುನ್ನುಡಿಯಾಗಿದೆ. ಅಂತ ಒಬ್ಬ ಮಹಾನ್ ವ್ಯಕ್ತಿಯ ಪ್ಲೆಕ್ಸ್ ನ್ನು ನಮ್ಮ ರಾಜ್ಯದಲ್ಲಿ ಪ್ರದರ್ಶನ ಮಾಡಿದರೆ ಅದನ್ನು ಹರಿದು ವಿಕೃತ ಮನೋಸ್ಥಿತಿ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಚಂದಮಾಮನನ್ನು ತೋರಿಸಿ ಮಕ್ಕಳಿಗೆ ಊಟಮಾಡಿಸುವ ಮೂಲಕ ಸಂಸ್ಕಾರ ನೀಡಿದ ದೇಶದಲ್ಲಿ ಈಗ ದೂರದರ್ಶನದ ಧಾರವಾಹಿಗಳಿಗೆ ಮಾರು ಹೋಗಿ ಮಕ್ಕಳಗೆ ಮೊಬೈಲ್ ಗೀಳು ಹುಟ್ಟಿಸಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದರು.

ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವೈ.ಜೆ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಹಿಂದು ಮಹಾಸಭಾ ಮಾಜಿ ಅಧ್ಯಕ್ಷ ರಾಜ್ಯ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಅರ್.ಎನ್.ಮಂಜಪ್ಪ ಇವರನ್ನು ಸಮಿತಿಯವರು ಸನ್ಮಾನಿಸಿ ಗೌರವಿಸಿದರು.

ಎಂ.ಸುರೇಶ್ ಸಿಂಗ್, ಎಂ.ಬಿ.ಮಂಜುನಾಥ, ಅರ್.ರಾಘವೇಂದ್ರ, ಸುದೀರ್, ಸುದೀಂದ್ರಪೂಜಾರಿ, ಆರ್.ಈ.ಭಾಸ್ಕರ, ಶ್ರೀನಿವಾಸ ಅಚಾರಿ, ಅರ್.ಹೆಚ್.ಶ್ರೀನಿವಾಸ ಅಚಾರ್, ಲಕ್ಷ್ಮಣ್ ಅಟೋ, ಎಸ್.ದಾನಪ್ಪ, ನಾಗರಾಜ್ ಪವಾರ್, ಎನ್.ಸತೀಶ್, ರವೀಂದ್ರಕೆರೆಹಳ್ಳಿ, ಡಿ.ಈ.ಮಧುಸೂದನ್, ಈಶ್ವರಮಳಕೊಪ್ಪ, ಭೀಮರಾಜ್, ಶ್ರೀಧರ, ಇನ್ನಿತರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಎಂ.ಸುರೇಶ್‌ಸಿಂಗ್ ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ನಂತರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು…

1 of 42

Leave A Reply

Your email address will not be published. Required fields are marked *