
-
ಚಕ್ರಾ ಸಾವೇಹಕ್ಲು ವೀಕ್ಷಿಸಲು ಮುಗಿಬಿದ್ದ ಪ್ರವಾಸಿಗರು | ಮಾಸ್ತಿಕಟ್ಟೆ ಕೆಪಿಸಿ ಕಚೇರಿ ಮುಂದೆ ಸಾಲು ನಿಂತ ವಾಹನಗಳು
ಹೊಸನಗರ: ವ್ಯಾಪಕ ಮಳೆಯಾಗಿ ಚಕ್ರಾ ಮತ್ತು ಸಾವೇಹಕ್ಲು ಜಲಾಶಯ ತುಂಬಿದ್ದು ಓವರ್ ಫ್ಲೋ ಆಗುತ್ತಿದ್ದು ಅದನ್ನು ವೀಕ್ಷಿಸಲು ಪ್ರವಾಸಿಗರು ಮುಗಿಬಿದ್ದಿದ್ದಾರೆ.
ಮಾಸ್ತಿಕಟ್ಟೆ ಕೆಪಿಸಿ ಕಚೇರಿಯಿಂದ ಪಾಸ್ ತರಬೇಕಾದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಕಚೇರಿಗೆ ಪ್ರವಾಸಿಗರು ಬರುತ್ತಿದ್ದಾರೆ. ಆಧಾರ್ ಜೆರಾಕ್ಸ್ ಪ್ರತಿಗಾಗಿ ಮಾಸ್ತಿಕಟ್ಟೆ ಗ್ರಾಮ ಒನ್ ಕೂಡ ಬ್ಯುಸಿಯಾಗಿದೆ. ವಾಹನಗಳು ಸಾಲುಗಳು ಕಚೇರಿ ಮುಂದೆ ಸಾಲುಗಟ್ಟಿ ನಿಂತಿವೆ.


ವೀಕೆಂಡ್ ಶನಿವಾರ ಮಧ್ಯಾಹ್ನದ ಮೇಲೆ ಜಲಾಶಯದಲ್ಲಿ ಜನಜಂಗುಳಿ ಕಂಡು ಬಂದಿತ್ತು. ಸಂಜೆ 6 ಗಂಟೆಗೆ ಬಂದು ನೋಡಲಾಗದೇ ವಾಪಾಸ್ ಹೋದ ಘಟನೆ ಕೂಡ ನಡೆದಿದೆ.
ಭಾನುವಾರ ಬೆಳಿಗ್ಗೆಯಿಂದಲೇ ಜಲಾಶಯದ ದಾರಿಯಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗಿದೆ.
