
ನಗರ ಹೋಬಳಿಯಲ್ಲಿ ಮುಂದುವರಿದ ಮಳೆ: ಚಕ್ರಾ ಜಲಾಶಯದಿಂದ 1500 ಕ್ಯೂಸೆಕ್ಸ್ ನೀರು ಬಿಡುಗಡೆ
ಹೊಸನಗರ: ತಾಲೂಕಿನಾಧ್ಯಂತ ಉತ್ತಮ ಮಳೆಯಾಗುತ್ತಿದ್ದು ನಗರ ಹೋಬಳಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ.
ಮಾಸ್ತಿಕಟ್ಟೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ ಜಲಾನಯನ ಪ್ರದೇಶದಲ್ಲಿ 172 ಮಿಮೀ, ಮಾಸ್ತಿಕಟ್ಟೆಯಲ್ಲಿ 170 ಮಿಮೀ, ಹುಲಿಕಲ್ ಪ್ರದೇಶದಲ್ಲಿ 168 ಮಿಮೀ, ಯಡೂರು ಭಾಗದಲ್ಲಿ 145ಮಿಮೀ, ಸಾವೇಹಕ್ಲು ಜಲಾಶಯ ವ್ಯಾಪ್ತಿಯಲ್ಲಿ 140 ಮಿಮೀ, ಚಕ್ರಾ ವ್ಯಾಪ್ತಿಯಲ್ಲಿ 113 ಮಿಮೀ ಮಳೆಯಾಗಿದೆ.


ಚಕ್ರಾ ಜಲಾಶಯದ ಗೇಟ್ ನ್ನು 1 ಮೀಟರ್ ಎತ್ತಲಾಗಿದ್ದು ಚಾನಲ್ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ 1500 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.
