
ಹೊಸನಗರ: ಕೊಡಚಾದ್ರಿ ಪದವಿ ಕಾಲೇಜಿನ ಬೀಗ ಒಡೆದು ಹಣ ದೋಚಿದ ಪ್ರಕರಣ ಮರೆಯಾಗುವ ಮುನ್ನವೇ.. ಮತ್ತೊಂದು ವಿದ್ಯಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ನಡೆದಿದೆ.
ತಾಲೂಕಿನ ನಗರ ಅಮೃತ ವಿದ್ಯಾಲಯದ ಬೀಗ ಒಡೆದು ಕಳ್ಳರು ಒಳನುಗ್ಗಿದ್ದಲ್ಲದೇ ಒಳಗಿನ ಬಹುತೇಕ ಬೀರುಗಳನ್ನು ಒಪನ್ ಮಾಡಿದ್ದಾರೆ. ಅಲ್ಲದೇ ಲಾಕರ್ ನ್ನು ಓಪನ್ ಮಾಡಿದ್ದು ಹಣ ಇಟ್ಟಿದ್ದ ಬಾಕ್ಸ್ ಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಮಂಗಳವಾರ ಬೆಳಿಗ್ಗೆ ವಿದ್ಯಾಲಯದ ಸಿಬ್ಬಂದಿಗಳ ಗಮನಕ್ಕೆ ಬಂದಿದೆ.
ಶಾಲೆಯಲ್ಲಿ ಪರೀಕ್ಷೆ ಮತ್ತು ಶಾಲಾ ಫೀಜ್ ನ್ನು ಕಲೆಕ್ಟ್ ಮಾಡಿ ಇಡಲಾಗಿತ್ತು. ಆದರೆ ಎಷ್ಟು ಏನು ಎಂಬುದು ಇನ್ನಷ್ಟೆ ತಿಳಿಯಬೇಕಿದೆ.
ಒಡೆದ ಬೀಗಗಳನ್ನು ಶಾಲೆ ಆವರಣದಲ್ಲಿ ಎಸೆಯಲಾಗಿದೆ. ಒಟ್ಟಾರೆ ಕೊಡಚಾದ್ರಿ ಪದವಿ ಕಾಲೇಜ್ ನಲ್ಲಿ ಕಳ್ಳತನ ಬಳಿಕ ನಗರ ಅಮೃತ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಕಳ್ಳರು ಶಾಲಾ ಕಾಲೇಜುಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಹುಟ್ಟುಹಾಕಿದ್ದು ಆತಂಕಕ್ಕೆ ಕಾರಣವಾಗಿದೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
