
- ತೀರ್ಥಹಳ್ಳಿ | ಮಾತ್ರೆ ನುಂಗಿ ಪ್ರಾಣ ಬಿಟ್ಟ ಮಹಿಳೆ !
ತೀರ್ಥಹಳ್ಳಿ : ಕುಟುಂಬದಲ್ಲಿ ಗಲಾಟೆ ನಡೆದ ಘಟನೆಯಿಂದ ಬೇಸತ್ತ ಮಹಿಳೆಯೋರ್ವಳು ಮಾತ್ರೆಗಳನ್ನು ನುಂಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಕುಟುಂಬದಲ್ಲಿ ನಡೆದ ಸಣ್ಣದೊಂದು ಗಲಾಟೆಯಿಂದ ಬೇಸತ್ತು ಮಾತ್ರೆ ಸೇವಿಸಿದ್ದಾರೆ. ನಂತರ ಆರೋಗ್ಯದಲ್ಲಿ ಏರು ಪೇರು ಆಗಿದ್ದು ಅವರನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.


ನಂತರ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಕಾರಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರಾವನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
