![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಕಾಂಗ್ರೆಸ್, ಬಿಜೆಪಿಯಿಂದ ಮಂಜುನಾಥ ಗೌಡರು ಬಲಿಪಶು
ಹೊಸನಗರ: ಮಂಜುನಾಥಗೌಡರನ್ನು ಅವರಿಗೆ ಬೇಕಾದಂತೆ ಅಪರಂಜಿ ಚಿನ್ನ, ಕಬ್ಬಿಣ ಎಂದು ಕರೆದ ಕಾಂಗ್ರೆಸ್ ಮತ್ತು ಬಿಜೆಪಿ ಆರ್.ಎಂ.ಮಂಜುನಾಥಗೌಡರನ್ನು ಮನಸಿಗೆ ಬಂದಂತೆ ಬಳಸಿ ಎಸೆಯುವ ಮೂಲಕ ಅವರನ್ನು ಬಲಿಪಶು ಮಾಡಿವೆ ಎಂದು ಸಹಕಾರಿ ಧುರೀಣ ವಾಟಗೋಡು ಸುರೇಶ್ ಆರೋಪಿಸಿದ್ದಾರೆ.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ತಮ್ಮ ಸ್ವಾರ್ಥಕ್ಕಾಗಿ ಮಂಜುನಾಥಗೌಡರನ್ನು ಎರಡು ಪಕ್ಷಗಳು ಬಳಸಿಕೊಂಡಿವೆ ಮಾತ್ರವಲ್ಲ ಹಂತಹಂತವಾಗಿ ಪಿತೂರಿಯನ್ನು ಎರಡೂ ಪಕ್ಷಗಳು ಮಾಡಿವೆ. ಆದರೆ ಅವೆಲ್ಲವನ್ನು ದಿಟ್ಟತನದಿಂದ ಎದುರಿಸಿದ ಮಂಜುನಾಥಗೌಡರು ಎಲ್ಲ ಆರೋಪಗಳಿಂದ ಪಾರಾಗಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಹಗರಣದಲ್ಲಿ ಮಂಜುನಾಥಗೌಡರನ್ನು ಸಿಲುಕಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ವ್ಯವಸ್ಥಿತ ಪ್ರಯತ್ನ ಮಾಡಲಾಗಿದೆ. ಎಲ್ಲಾ ಹಂತದ ತನಿಖೆಗಳು ನಡೆದು ಮಂಜುನಾಥಗೌಡರಿಗೆ ಜಯ ಸಿಗುತ್ತಲೇ ಬಂದಿದೆ. ಅಷ್ಟಕ್ಕು ಸಮಾಧಾನ ಕಾಣದ ರಾಜಕೀಯ ಪ್ರೇರಿತ ಹಿತಾಸಕ್ತಿಗಳು ಮತ್ತೆ ಮತ್ತೆ ಪಿತೂರಿ ಮಾಡುತ್ತಿರುವುದನ್ನು ಖಂಡಿಸಿದರು.
ರಾಜಕೀಯವಾಗಿ ಮುಗಿಸುವ ಯತ್ನಕ್ಕೆ ನಿರಂತರ ಸೋಲಾಗುತ್ತಲೇ ಇದೆ. ಇನ್ನಾದರು ಅರಿತು ಪಿತೂರಿ ಮಾಡುವುದನ್ನು ನಿಲ್ಲಿಸಲು ಎಂದು ಆಗ್ರಹಿಸಿದರು.
ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಮಂಜುನಾಥಗೌಡರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸುಲಭದ ಮಾತಲ್ಲ. ಅವರು ಸಕ್ರೀಯವಾಗಿದ್ದರೆ ಸಹಕಾರಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣುವುದರಲ್ಲಿ ಸಂಶಯವಿಲ್ಲ. ರಾಜಕೀಯವಾಗಿ ಎದುರಿಸಿ ಆದರೆ ಕುತಂತ್ರ ಮಾಡುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.
ನಗರ ನೀಲಕಂಠೇಶ್ವರ ಸೊಸೈಟಿ ಅಧ್ಯಕ್ಷ ಎಂ.ಕೆ.ಲೀಲಕೃಷ್ಣ, ಮಂಜುನಾಥ ಗೌಡರು ಎಲ್ಲಾ ಹಂತದ ತನಿಖೆಯನ್ನು ಗೆದ್ದು ಮತ್ತೆ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿದಿದ್ದಾರೆ. ಈ ಜನಪ್ರಿಯತೆ ತಡೆಯಲಾಗದ ಸ್ಥಾಪಿತ ಹಿತಾಸಕ್ತಿಗಳು ಕುತಂತ್ರ ನಡೆಸುತ್ತಿವೆ. ಅದರೆ ಅದರಿಂದ ಯಾವುದೇ ಪ್ರಯೋಜನವಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಹಕಾರಿ ಧುರೀಣರಾದ ರಾಘು ಮಾಸ್ತಿಕಟ್ಟೆ, ವಿಠೋಬ ಚಿಕ್ಕಪೇಟೆ, ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)