
-
ದುಬೈ ಕನ್ನಡ ಪಾಠಶಾಲೆಯ ದಶಮಾನೋತ್ಸವ | ಕನ್ನಡ ಕಲಿಕಾ ಆರಂಭೋತ್ಸವ | ಆನ್ ಲೈನ್ ಕನ್ನಡ ಕಲಿಕೆಗೆ ಚಾಲನೆ| ಮುಖ್ಯ ಅತಿಥಿಯಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ | ನ.4 ರಂದು ನಡೆಯಲಿರುವ ಕಾರ್ಯಕ್ರಮ
ದುಬೈ| ದುಬೈ ಕನ್ನಡ ಪಾಠಶಾಲೆಯ ದಶಮಾನೋತ್ಸವ ಅಂಗವಾಗಿ ಆನ್ ಲೈನ್ ಕನ್ನಡ ಕಲಿಕೆಗೆ ಚಾಲನೆ ನೀಡುವ ಮೂಲಕ ಕನ್ನಡ ಕಲಿಕಾ ಪ್ರಾರಂಭೋತ್ಸವಗೊಳ್ಳಲಿದೆ.
ನವೆಂಬರ್ 04 ರಂದು ಯುಎಇ ಸಮಯ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದೆ.


-
ಮುಖ್ಯ ಅತಿಥಿಯಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ|
ಕನ್ನಡೋತ್ಸವ 2023 ರ ಅಂಗವಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಸರ್ಕಾರದ ಎನ್.ಆರ್.ಐ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಯುಎಇ ದುಬೈನ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ಉಪಾಧ್ಯಕ್ಷ ಮೋಹನ ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕನ್ನಡಮಿತ್ರರು ಯುಎಇ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ಸಿದ್ದಲಿಂಗೇಶ್ ಬಿ ರೇವಪ್ಪ, ಮುಖ್ಯ ಕಾರ್ಯದರ್ಶಿ ಸುನಿಲ್ ಗವಾಸ್ಕರ್, ಖಜಾಂಚಿ ನಾಗರಾಜ ರಾವ್, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಮೇಟಿ ಮನವಿ ಮಾಡಿದ್ದಾರೆ.
