
ಹೊಸನಗರ ಜು.26: ಮಕ್ಕಳಿಗೆ ಇಂದಿನ ಬಿಸಿಯೂಟದ ಜೊತೆ ಮೊಟ್ಟೆ ಮತ್ತು ಚಿಕ್ಕಿ ವಿತರಣೆಯನ್ನು ಸರ್ಕಾರ ಹಮ್ಮಿ ಕೊಂಡಿದ್ದು ಮಾವಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಮಕ್ಕಳಿಗೆ ಉತ್ತಮ ಆಹಾರ ಸಿಗಬೇಕು ಯಾವ ಮಕ್ಕಳು ಕೂಡ ಅಪೌಷ್ಠಿಕತೆಯಿಂದ ಬಳಲಬಾರದು ಎನ್ನುವ ಆಶಯದಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದರು.


ಚಿಕ್ಕಿ ತಯಾರಿಸಲು ಮಹಿಳೆಯರಿಗೆ ಅವಕಾಶ:
ಮೊಟ್ಟೆಗಳನ್ನು ತಂದು ಅದನ್ನು ಮಕ್ಕಳಿಗೆ ನೀಡುವ ತನಕ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಇನ್ನು ತಾಲೂಕಿನಲ್ಲಿ ಚಿಕ್ಕಿ ಕೊರತೆಯಿದ್ದು ಸ್ಥಳೀಯವಾಗಿ ಮಹಿಳಾ ಸ್ವಸಹಾಯ, ಸ್ತ್ರೀಶಕ್ತಿ ಗುಂಪುಗಳಿಗೆ ಚಿಕ್ಕಿ ತಯಾರಿಸುವ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಉತ್ತಮ ಆಹಾರ ಸಿಗುತ್ತದೆ ಅಲ್ಲದೇ ಸ್ಥಳೀಯ ಮಹಿಳೆಯರಿಗೂ ಉದ್ಯೋಗ ನೀಡಿದಂತಾಗುತ್ತದೆ ಎಂದರು.
ಪ್ರಭಾರ ಬಿಇಒ ರಂಗನಾಥ್, ಶಿಕ್ಷಣ ಸಂಯೋಜಕರು, ಸಮನ್ವಯಾಧಿಕಾರಿಗಳು, ಮುಖ್ಯ ಶಿಕ್ಷಕ, ಶಿಕ್ಷಕಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
