
-
Hosanagara| ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಚೇರಿ ಸಹಾಯಕರಾಗಿ ರಾಜೇಶ ಹಿರಿಮನೆ ನೇಮಕ| ಹೊಸನಗರದಲ್ಲಿ ಪ್ರಮುಖರಿಂದ ಅಭಿನಂದನೆ
ಹೊಸನಗರ: ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಇವರ ಹೊಸನಗರ ಕಚೇರಿ ಸಹಾಯಕರಾಗಿ ರಾಜೇಶ ಹಿರಿಮನೆ ನೇಮಕಗೊಂಡಿದ್ದಾರೆ.
ಹೊಸನಗರ ತಾಪಂನಲ್ಲಿ ಶಾಸಕರ ಕಚೇರಿ ತೆರೆಯಲಾಗಿದ್ದು ಜನಸಾಮಾನ್ಯರಿಗೆ ಸ್ಪಂದಿಸುವ ಸಲುವಾಗಿ ನೂತನ ಸಹಾಯಕರನ್ನು ನೇಮಿಸಲಾಗಿದೆ.


ಕಚೇರಿಗೆ ಆಗಮಿಸಿದ ನೂತನ ಸಹಾಯಕ ರಾಜೇಶ್ ಹಿರಿಮನೆಗೆ ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಎನ್.ಆರ್.ದೇವಾನಂದ್, ತಾಪಂ ಮಾಜಿ ಸದಸ್ಯ ಬಂಕ್ರಿಬೀಡು ಮಂಜುನಾಥ್, ನಗರ ಹೋಬಳಿ ಬಿಜೆಪಿ ಅಧ್ಯಕ್ಷ ಎನ್.ವೈ.ಸುರೇಶ್ ವಿಸ್ತಾರಕ ನಿಶಾಂತ್, ಸತೀಶ ಹೊಸಬೀಡು, ಚಂದ್ರಪ್ಪ ಹೆಬ್ಬುರಳಿ, ಮಂಜುನಾಥ ಬೇಳೂರು, ಪ್ರಶಾಂತ್ ಹಿರಿಮನೆ, ಆಶಿಕ್ ಬಾವಿಕಟ್ಟೆ ಅಭಿನಂದಿಸಿದರು.
-
ಜಾನೇಂದ್ರಣ್ಣ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ
ಶಾಸಕರು, ನಮ್ಮ ನಾಯಕರಾದ ಆರಗ ಜ್ಞಾನೇಂದ್ರಣ್ಣ ನನ್ನ ಮೇಲೆ ವಿಶ್ವಾಸವಿರಿಸಿ ಕಚೇರಿ ಸಹಾಯಕನ ಜವಾಬ್ದಾರಿ ನೀಡಿದ್ದಾರೆ. ಅವರ ಗೌರವಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವೆ.
– ರಾಜೇಶ್ ಹಿರಿಮನೆ
ಶಾಸಕರ ಕಚೇರಿ ಸಹಾಯಕ
