
ನೋಡ ನೋಡುತ್ತಿದ್ದಂತೆ ಬಿದ್ದ ಮರ : ಮಾಜಿ ಸಚಿವರು, ಶಾಸಕರ ತಂಡದಿಂದಲೇ ಮರ ತೆರವು ಕಾರ್ಯ:
ಹೊಸನಗರ: ಮಳೆ ದುರಂತದ ಜೊತೆಗೆ ಇಂತಹದ್ದೊಂದು ವಿಶೇಷತೆಗೆ ನಗರ ಹೋಬಳಿ ಸಾಕ್ಷಿಯಾಗಿದೆ.

ಚಕ್ರಾ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಮಾಜಿ ಸಚಿವರು ಶಾಸಕರ ದಂಡೇ ತೆರಳುತ್ತಿದ್ದಂತೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇನ್ನೇನು ಮಾಡೋದು ಎಂದು ಯೋಚಿಸುವಷ್ಟರಲ್ಲೇ ಅಲ್ಲೇ ಇದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ಇಷ್ಟು ಜನ ಇದೀವಿ ಎಳೆದು ಹಾಕೋದಲ್ವಾ ಅಂತ ಕೈಹಾಕಿಯೇ ಬಿಟ್ಟರು. ತಡಮಾಡದೇ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ರವಿಕುಮಾರ್ ಮರ ತೆರವಿಗೆ ಕೈಹಾಕಿಯೇ ಬಿಟ್ಟರು.



ಹುರುಪುಗೊಂಡ ಉಳಿದ ಮುಖಂಡರು, ಕಾರ್ಯಕರ್ತರು ಹೊಸ ಹುರುಪಿನೊಂದಿಗೆ ಅಖಾಡಕ್ಕಿಳಿದರೇ.. ನೋಡ ನೋಡುತ್ತಲೇ ಮರ ಬಿದ್ದ ರೀತಿಯಲ್ಲೇ.. ಮರವನ್ನು ರಸ್ತೆಯಿಂದಾಚೇ ಎಳೆದು ಹಾಕಿಯೇ ಬಿಟ್ಟರು.
ಜನಪ್ರತಿನಿಧಿಗಳ ದಂಡು ಬರುವ ಕೆಲವೇ ಕ್ಷಣದಲ್ಲಿ ಮರ ಉರುಳಿತ್ತು. ಅದೃಷ್ಟ ವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
