
ಆರ್ಯ ಈಡಿಗ ಸಂಘದ ನೂತನ ಸಮಿತಿ ರಚನೆಯಾಗಲಿ : ಮಾಜಿ ಶಾಸಕ ಬಿ.ಸ್ವಾಮಿರಾವ್
ಹೊಸನಗರ: ತಾಲೂಕು ಆರ್ಯ ಈಡಿಗ ಸಂಘದ ಲೆಕ್ಕಪತ್ರ ಸರಿಪಡಿಸಬೇಕು. ಸಂಘದ ನೂತನ ಸಮಿತಿ ಆಗಬೇಕು ಅಲ್ಲಿವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಘೋಷಿಸಿದರು.
ತಾಲೂಕು ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಸಂಘದ ನಿಯಮಬಾಹಿರ ನಡೆ ಖಂಡಿಸಿ ಮಾಜಿ ಶಾಸಕ ಬಿ ಸ್ವಾಮಿ ರಾವ್ ಈಡಿಗರ ಸಂಘದ ಸಂಕೀರ್ಣ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ಮಾತನಾಡಿದರು.
ಕಟ್ಟಡದಉದ್ಘಾಟನೆಯ ದಿನದಂದೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು ಸಮಾಜ ಪ್ರಮುಖರು ಮನವಿಯ ಮೇರೆಗೆ ನಾನು ಪ್ರತಿಭಟನೆಯನ್ನು ತಾತ್ಕಾಲಿಕ ಮುಂದೂಡಿದೆ. ಈ ಸಮಾಜದ ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ ಆದರೆ ನಾನು ಕೆಲ ತಿಂಗಳುಗಳ ಹಿಂದೆಯೇ ಪತ್ರದ ಮೂಲಕ ನನ್ನ ಬೇಡಿಕೆಯನ್ನು ತಿಳಿಸಿದ್ದು ಪ್ರತಿಭಟನೆ ಉದ್ದೇಶ, ಸಂಘದಲ್ಲಾದ ಅವ್ಯವಹಾರಗಳ ಮಾಹಿತಿಯನ್ನು ಸಂಘದ ಹಿರಿಯ ಹಾಗೂ ಪ್ರಮುಖ ನಾಯಕರಿಗೆ ತಿಳಿಸಿದ್ದೆ. ಆದರೆ ಈವರೆಗೂ ನನಗೆ ಅದಕ್ಕೆ ಸಂಬಂಧಿಸಿದ ಸೂಕ್ತ ಉತ್ತರ ಹಾಗೂ ಪರಿಹಾರ ದೊರೆತಿಲ್ಲ ಈ ನಿಟ್ಟಿನಲ್ಲಿ ಈ ದಿನ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ನಿರ್ಧಾರವನ್ನು ಮಾಡಿದ್ದೇನೆ ಎಂದರು.
ನನ್ನ ಸ್ವಂತ ಹಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಎರಡು ಕೋಟಿಗು ಅಧಿಕ ಬಾಡಿಗೆ ಹಣದ ಲೆಕ್ಕ ಹಾಗೂ ಈಗಿನ ಸಂಘದ ಅಧ್ಯಕ್ಷರ ರಾಜೀನಾಮೆಯ ಜೊತೆಗೆ ಚುನಾವಣೆಯ ಮೂಲಕ ಹೊಸ ಕಾರ್ಯಕಾರಿ ಸಮಿತಿ ಸ್ಥಾಪನೆಯನ್ನು ಮಾಡಬೇಕು ಎಂಬುದು ನನ್ನ ಆಗ್ರಹ ಇದು ಈಡೇರಿರುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.
ಜನಾಂಗದ ಪ್ರಮುಖ ರಾಜಕೀಯ ನಾಯಕರು ಬೇಟಿ..
ಈ ನಡುವೆ ಜನಾಂಗದ ಪ್ರಮುಖ ರಾಜಕೀಯ ನಾಯಕರಾದ ಜಿಡಿ ನಾರಾಯಣಪ್ಪ, ಹರತಾಳು ಹಾಲಪ್ಪ, ಕಲಗೂಡು ರತ್ನಾಕರ್, ರಾಜ ನಂದಿನಿ, ತಾಲೂಕು ದಂಡಾಧಿಕಾರಿಗಳಾದ ಭರತ್ ರಾಜ್ ಪ್ರತಿಭಟನೆ ಸ್ಥಳಕ್ಕೆ ಭೇಟಿಯನ್ನು ನೀಡಿ ಪ್ರತಿಭಟನ ನಿರತ ಮಾಜಿ ಶಾಸಕ ಬಿ ಸ್ವಾಮಿ ರಾವ್ ಅವರೊಡನೆ ಚರ್ಚಿಸಿ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು.
ಆರೋಗ್ಯದಲ್ಲಿ ಏರುಪೇರು.
ಪ್ರತಿಭಟನೆ ನಿರತ ಬಿ ಸ್ವಾಮಿ ರಾವ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಿದ ವೈದ್ಯರು ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ಮಾಹಿತಿಯನ್ನು ನೀಡಿ ಸೂಕ್ತ ಔಷಧಿಯನ್ನು ಪಡೆದುಕೊಳ್ಳುವಂತೆ ಸಲಹೆಯನ್ನ ನೀಡಿದರು ಈ ನಡುವೆ ಕಾಗುಡುತಿಮ್ಮಪ್ಪನವರ ಪುತ್ರಿ ಡಾ ರಾಜ ನಂದಿನಿ ಸ್ವಾಮಿರಾವ್ ಅವರಿಗೆ ಮಾತ್ರೆಯನ್ನು ನೀಡಿ ಉಪಚರಿಸಿದರು.
ಸಭೆಯಲ್ಲಿ ಡಾ.ಬಿ.ಶ್ರೀನಿವಾಸ್ ಸೊನಲೆ, ಮಹಾಬಲರಾವ್, ನಗರ ನಿತಿನ್, ವಾಸಪ್ಪ, ಹೋರಾಟ ವೇದಿಕೆಯ ಪ್ರಮುಖರು ಪಾಲ್ಗೊಂಡಿದ್ದರು.











